ಹುಬ್ಬಳ್ಳಿ: ಯುವಕನೊಬ್ಬನಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ನಗರದ ಸ್ಟೇಷನ್ ರಸ್ತೆಯ ಬಾರ್ ಒಂದರಲ್ಲಿ ನಡೆದಿದೆ.
ಕೇಶ್ವಾಪುರದ ವಿನಾಯಕ ಬಳ್ಳಾರಿ ಹಲ್ಲೆಗೆ ಒಳಗಾದ. ಮನೋಜ ಹಲ್ಲೆ ನಡೆಸಿದ ಆರೋಪಿ. ಜಗಳ ಬಿಡಿಸಿದ ಸ್ನೇಹಿತರು ಗಾಯಾಳುವನ್ನು ಕಿಮ್ಸ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
10/12/2021 08:35 am