ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಹೆಣ

ಧಾರವಾಡ: ಧಾರವಾಡ ಟಿಕಾರೆ ರಸ್ತೆಯಲ್ಲಿರುವ ಆಂಜನೇಯನ ದೇವಸ್ಥಾನದ ಹಿಂಭಾಗದಲ್ಲಿರುವ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಹೆಣವೊಂದು ಪತ್ತೆಯಾಗಿದೆ.

ಕಳೆದ ಕೆಲ ದಿನಗಳ ಹಿಂದೆಯೇ ಈ ಹೆಣವನ್ನು ಬಾವಿಯಲ್ಲಿ ಎಸೆಯಲಾಗಿದ್ದು, ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಶವ ಪುರುಷನದ್ದಾಗಿದ್ದು, ಇಷ್ಟು ದಿನ ಯಾರ ಕಣ್ಣಿಗೂ ಶವ ಕಾಣಿಸಿರಲಿಲ್ಲ. ಬಾವಿ ಸಂಪೂರ್ಣ ಕಸದಿಂದ ಮುಚ್ಚಿದ್ದು, ಅದರ ಮಧ್ಯೆ ಈ ಹೆಣ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ಯಾರು ಎಂಬುದು ಇನ್ನಷ್ಟೆ ತನಿಖೆಯಿಂದ ಗೊತ್ತಾಗಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

06/12/2021 05:06 pm

Cinque Terre

38.17 K

Cinque Terre

0

ಸಂಬಂಧಿತ ಸುದ್ದಿ