ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಣದ ಬೇಡಿಕೆ ಇಟ್ಟ ತಲಾಠಿ ಈಗ ಎಸಿಬಿ ವಶಕ್ಕೆ

ನವಲಗುಂದ : ವರುಣನ ಅಬ್ಬರಕ್ಕೆ ಮನೆಗಳಿಗೆ ಈ ಬಾರಿ ಸಾಕಷ್ಟು ಹಾನಿ ಉಂಟಾಗಿದೆ. ಇದರಿಂದ ಜನರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಗಳನ್ನು ಕಳೆದುಕೊಂಡು ಆರ್ಥಿಕವಾಗಿ ಕುಗ್ಗಿದ್ದ ನಿರಾಶ್ರಿತರಿಗೆ ಹಣ ಕೇಳಿದ್ದ ತಲಾಠಿ ನೌಕರನೊಬ್ಬ ಈಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ನವಲಗುಂದದಲ್ಲಿ ನಡೆದಿದೆ.

ಹೌದು ಎಸಿಬಿ ಬಲೆಗೆ ಬಿದ್ದ ಪ್ರದೀಪ ಬಸವಂತಕರ ತಲಾಠಿ ನೌಕರ ಸಾರ್ವಜನಿಕರಿಂದ ಮಳೆಗೆ ಬಿದ್ದ ಮನೆಯ ವರದಿಯನ್ನು ನೀಡಲು ಹತ್ತು ಸಾವಿರ ರೂಪಾಯಿ ಬೇಡಿಕೆಯನ್ನು ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಎಸಿಬಿ ಅಧಿಕಾರಿಗಳಿಗೆ ದೂರು ಕೂಡ ನೀಡಲಾಗಿತ್ತು. ದೂರಿನನ್ವಯ ಅಧಿಕಾರಿಗಳು ದಾಳಿ ನಡೆಸಿ, ಪ್ರದೀಪ ಬಸವಂತಕರ ತಲಾಠಿ ನೌಕರನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ

Edited By :
Kshetra Samachara

Kshetra Samachara

03/12/2021 06:31 pm

Cinque Terre

23.58 K

Cinque Terre

2

ಸಂಬಂಧಿತ ಸುದ್ದಿ