ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕದ್ದ 2 ಬೈಕ್‌ಗಳ ಸಮೇತ ಖದೀಮ ಅರೆಸ್ಟ್

ಹುಬ್ಬಳ್ಳಿ: ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ ಒಟ್ಟು 75,000 ರೂ. ಮೌಲ್ಯದ ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಉಣಕಲ್ ತಾಜನಗರದ ಜುನೇದ ಮಹಮ್ಮದ ಧಾರವಾಡ ಬಂಧಿತ ಆರೋಪಿ. ಬಿಡ್ನಾಳದಲ್ಲಿ ಆಕ್ಟಿವಾ ಹೊಂಡಾದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ವಿಷಯ ಗೊತ್ತಾಗಿದೆ.

ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಇನ್‌ಸ್ಪೆಕ್ಟರ್‌ ಶ್ಯಾಮರಾಜ ಸಜ್ಜನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಎಎಸ್‌ಐ ಎಂ.ಬಿ, ಈಟಿ, ಸಿಬ್ಬಂದಿ ವಿ.ಆರ್. ಸುರವೆ, ಆರ್. ಎಸ್. ಹರಕಿ, ಬಿ.ಎಸ್. ಗಳಗಿ, ಎಸ್.ಎಫ್. ಕಣಬೂರ ತಂಡದಲ್ಲಿದ್ದರು.

Edited By : Nagaraj Tulugeri
Kshetra Samachara

Kshetra Samachara

30/11/2021 09:55 pm

Cinque Terre

34.47 K

Cinque Terre

2

ಸಂಬಂಧಿತ ಸುದ್ದಿ