ಹುಬ್ಬಳ್ಳಿ: ವಿವಾಹಿತನೋರ್ವ ಮದುವೆಯಾಗುವಂತೆ ಯುವತಿಯೊಬ್ಬಳಿಗೆ ಬ್ಲ್ಯಾಕ್‌ಮೇಲ್ ಮಾಡಿದ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದಕುಮಾರ್ ಭೋವಿ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿದ ವ್ಯಕ್ತಿ. ಆನಂದಕುಮಾರ್ ಮೊದಲೇ ಮದುವೆಯಾಗಿದ್ದ ವಿಷಯವನ್ನು ಮುಚ್ಚಿಟ್ಟು ಯುವತಿಯನ್ನು ಪ್ರೀತಿ ಮಾಡಿದ್ದ. ಆತನಿಗೆ ಮದುವೆಯಾಗಿರುವ ಕೆಲವು ದಿನಗಳ ಬಳಿಕ ಗೊತ್ತಾಗುತ್ತಿದ್ದಂತೆ ಯುವತಿ ಆತನಿಂದ ದೂರವಾಗಲು ಯತ್ನಿಸಿದ್ದಾಳೆ. ಆದರೆ ಆನಂದಕುಮಾರ್ ಯುವತಿಯನ್ನು ಹಿಂಬಾಲಿಸುತ್ತ ಕಿರಿಕಿರಿ ನೀಡುತ್ತಾ ಬಂದಿದ್ದಾನೆ.
ಅಷ್ಟೇ ಅಲ್ಲದೆ ಯುವತಿ ಜೊತೆಗಿರುವ ಫೋಟೋಗಳನ್ನು ರಾಯಚೂರು ಮೂಲದ ಆಕೆಯ ಸಂಬಂಧಿಕರಿಗೆ ಕಳುಹಿಸಿದ್ದಾನೆ. ನ.14ರಂದು ವೀರಾಪುರ ಓಣಿಯಲ್ಲಿ ತನ್ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿದ್ದ ಎಂದು ಯುವತಿಯು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
26/11/2021 01:01 pm