ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡಿಗರೇ ಜೋಕೆ ನಗರಕ್ಕೆ ಕಾಲಿಟ್ಟಿವೆ 500 ರೂ. ಖೋಟಾ ನೋಟು

ಧಾರವಾಡ: ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಇತ್ತೀಚೆಗಷ್ಟೆ 500 ರೂಪಾಯಿ ಖೋಟಾ ನೋಟು ಪತ್ತೆಯಾದ ಬೆನ್ನಲ್ಲೇ ಇದೀಗ ಧಾರವಾಡ ಉಪನಗರ ಠಾಣೆ ಪೊಲೀಸರು ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಗದ ಗ್ರಾಮದ ಸಂತೋಷ ಭೋವಿ ಹಾಗೂ ರವಿ ಅವರಾದಿ ಎಂಬುವವರೇ ಬಂಧಿತ ಆರೋಪಿಗಳು.

ಇವರಿಬ್ಬರೂ ಸೇರಿಕೊಂಡು ಮಂಜು ಊರ್ಫ್ ಮಂಜುನಾಥ ಬಳಿಗಾರ ಹಾಗೂ ಸಂಜು ಮೊರಬ ಎಂಬುವವರು ತಯಾರಿಸಿದ 500 ಮುಖಬೆಲೆಯ ಒಟ್ಟು 35 ಖೋಟಾ ನೋಟುಗಳನ್ನು ಪ್ರಜ್ವಲ ಭೋವಿ ಎನ್ನುವವರ ಮುಖಾಂತರ ಪಡೆದು ಧಾರವಾಡ ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಿದ್ದರು.

ಈ ವೇಳೆ ಇಬ್ಬರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಒಂದು ಪಲ್ಸರ್ ಬೈಕ್‌ನ್ನೂ ಸಹ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಇನ್ನೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

24/11/2021 10:41 pm

Cinque Terre

42.88 K

Cinque Terre

20

ಸಂಬಂಧಿತ ಸುದ್ದಿ