ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿ ಹಾಡಹಗಲೇ ಮಾರಕಾಸ್ತೃಗಳು ಸದ್ದು ಮಾಡುತ್ತಿವೆ. ದುಷ್ಕರ್ಮಿಗಳು ರೈಲ್ವೆ ನೌಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ನಗರದ ರೇಲ್ವೆ ಶೆಡ್ ಮುಂಭಾಗದಲ್ಲಿ ನಡೆದಿದೆ.
ಹುಬ್ಬಳ್ಳಿ- ಗದಗ ರಸ್ತೆಯಲ್ಲಿರುವ ಲೋಕೋ ಶೆಡ್ ಮುಂಭಾಗದಲ್ಲಿಯೇ ಚಂದ್ರಶೇಖರ ನಾಯ್ಡು ಎಂಬುವವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂರ್ನಾಲ್ಕು ಬಾರಿ ಇರಿದಿದ್ದರಿಂದ ತೀವ್ರವಾದ ರಕ್ತಸ್ರಾವವಾಗಿದೆ.
ತಕ್ಷಣವೇ ರೈಲ್ವೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧಾರವಾಡದ ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ, ಸ್ಥಳಕ್ಕೆ ಆಗಮಿಸಿ, ಮಾಹಿತಿಯನ್ನು ಕಲೆ ಹಾಕಿದ್ದಾರೆ.
Kshetra Samachara
18/11/2021 03:52 pm