ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೌಕರಿ ಕೊಡಿಸುವುದಾಗಿ ವಂಚನೆ: ಕೇಶ್ವಾಪೂರ ಠಾಣೆಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ: ಮೈಸೂರಿನಲ್ಲಿ ಪಿಎಸ್‌ಐ ಇದ್ದೇನೆ ಎಂದು ಸುಳ್ಳು ಹೇಳಿ ಕಾನ್‌ಸ್ಟೆಬಲ್ ಕೆಲಸ ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 4,15,000 ರೂ. ಪಡೆದು, ನಕಲಿ ಆರ್ಡರ್ ಕಾಪಿ ಕೊಟ್ಟು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.ಕ್ರಿಶ್ಚಿನಾ ನಕಲಿ ಐಡಿ ತೋರಿಸಿ ಲೈದಿಯಾ ಅವರನ್ನು ಪರಿಚಯ ಮಾಡಿಕೊಂಡಿದ್ದಳು. ನನಗೆ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಗಳು ಪರಿಚಯ ಇದ್ದಾರೆ. ನಿನಗೆ ಪೊಲೀಸ್ ಕಾನ್‌ಸ್ಟೆಬಲ್‌ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿದ್ದಳು.

ಬಳಿಕ ಜೂನ್ 15ರಿಂದ ಸೆಪ್ಟೆಂಬರ್ 15ರವರೆಗೆ ಹಂತ ಹಂತವಾಗಿ ಲೈದಿಯಾ ಹಾಗೂ ಅವರ ಪತಿಯಿಂದ ಫೋನ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಳು. ನಂತರ ನಕಲಿ ಮೆಡಿಕಲ್ ಸರ್ಟಿಫಿಕೇಟ್ ಹಾಗೂ ನಕಲಿ ಆರ್ಡರ್ ಪ್ರತಿ ನೀಡಿ ವಂಚಿಸಿದ್ದಾಳೆ ಎಂದು ಲೈದಿಯಾ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಬೃಂದಾವನ ಕಾಲನಿಯ ಕ್ರಿಶ್ಚಿನಾ ಗೋಟಿಮುಕ್ಕಲು ವಿರುದ್ಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

18/11/2021 09:06 am

Cinque Terre

34.25 K

Cinque Terre

0

ಸಂಬಂಧಿತ ಸುದ್ದಿ