ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಅರ್ಚಕರ ಮೇಲೆ ಹಲ್ಲೆ: ದೇವಸ್ಥಾನದಲ್ಲಿಯೇ ಹೀಗಾದರೇ ಹೇಗೆ...?

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗೊಕುಲ ರಸ್ತೆಯಲ್ಲಿರುವ ಗ್ರೀನ ಗಾರ್ಡನ್ ಕಾಲೋನಿಯ ಶ್ರೀ ಕರೆಯಮ್ಮ ದೇವಸ್ಥಾನದ ಅರ್ಚಕರಾದ ಮಂಜುನಾಥ ಹೆಬ್ಬಾರ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ದೇವಸ್ಥಾನ ಅರ್ಚಕರು, ಗಾರ್ಡನಲ್ಲಿರುವ ಕರಕಿಯನ್ನು ತುಳಿಯಬೇಡಿ ಅದನ್ನು ದೇವರಿಗೆ ಬಳಸುತ್ತೇವೆ ಎಂದು ಹೇಳಿದ್ದಕ್ಕೆ ಅರ್ಚಕರ ವಿರುದ್ದ ಜಗಳವಾಡಿದ್ದರು.

ಮಾರನೇ ದಿನ ಅಂದರೆ, ನವೆಂಬರ್ 2 ರಂದು ದೇವಸ್ಥಾನಕ್ಕೆ ಬಂದು ಜಡಿ ಕುಟುಂಬದವರು ಅರ್ಚಕರ ಜೊತೆ ಜಗಳ ತೆಗೆದಿದ್ದಾರೆ‌. ಅಷ್ಟೇಯಲ್ಲ ಪ್ರದೀಪ‌ ಜಡಿ ಅವರು ದೇವಸ್ಥಾನದ ಪೂಜಾರಿ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಕುರಿತಂತೆ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಸ್ಥಳಿಯ ಕಾರ್ಪೋರೇಟರ್ ಸರಸ್ವತಿ ದೂಂಗಡಿ ಅವರ ಪತಿ ವಿನಾಯಕ ದೂಂಗಡಿ ಅವರು ಪೋಲಿಸರ್ ಮಧ್ಯಸ್ಥಿಕೆಯಲ್ಲಿ ಎಲ್ಲರನ್ನು ಸೇರಿಸಿ ರಾಜಿ ಮಾಡಿಸಿದ್ದಾರೆ.

ಆದರೆ ಈ ಘಟನೆ ನಂತರ ಅರ್ಚಕರು ದೇವಸ್ಥಾನಕ್ಕೆ ಬರುತ್ತಿಲ್ಲ. ದೇವಸ್ಥಾನದ ಕಮೀಟ ಅವರು ಅರ್ಚಕರು ತಿಂಗಳಿಗೆ 6 ಸಾವಿರ‌ ರೂಪಾಯಿನ್ನು ನೀಡುತ್ತಾರೆ. ಇದರಿಂದ ಅರ್ಚಕ ಮಂಜುನಾಥ ಅವರು ತಮ್ಮ ತಾಯಿಯ ಜೊತೆ ಜೀವನ ಸಾಗಿಸುತ್ತಿದ್ದಾರೆ. ಸ್ಥಳಿಯ ಭಕ್ತರೆಲ್ಲರೂ ಅರ್ಚಕರನ್ನು ಮರಳಿ ದೇವಸ್ಥಾನಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ. ಆದರೂ ಕೂಡ ಅರ್ಚಕರು ದೇವಸ್ಥಾನದ ಪೂಜಾ ಕಾರ್ಯಗಳಲ್ಲಿ ತೊಡಗದೇ ಇರುವುದರಿಂದ ಸ್ಥಳೀಯರು ಬೇಸರಗೊಂಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/11/2021 05:04 pm

Cinque Terre

59.86 K

Cinque Terre

59

ಸಂಬಂಧಿತ ಸುದ್ದಿ