ಹುಬ್ಬಳ್ಳಿ: ಆತ ವೃತ್ತಿಯಲ್ಲಿ ಯೋಧ. ಯೋಧನನ್ನು ಮದುವೆಯಾದರೇ ಚೆನ್ನಾಗಿ ಇರಬಹುದು ಎಂದು ಯುವತಿಯೋರ್ವಳು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆದರೆ, ಆತ ಮಾಡಿದ್ದೆ ಬೇರೆ. ಮುದ್ದಾದ ಮಗು ಇದ್ದರೂ ಕೂಡ ಮೊದಲ ಹೆಂಡತಿಗೆ ಮೋಸ ಮಾಡಿ, ಮೂರು ಮದುವೆಯಾಗಿ ಯಾಮಾರಿಸಿದ್ದಾನೆ. ಇದೀಗ ಮೊದಲ ಹೆಂಡತಿ ಹಾಗೂ ಎರಡನೇ ಹೆಂಡತಿ ಯೋಧನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡೋಣ ಬನ್ನಿ...
2015 ರಲ್ಲಿ ಗುರುಸಿದ್ದಪ್ಪ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ದೀಪಾ ಅವರೊಂದಿಗೆ ಅರೆಂಜ್ ಮ್ಯಾರೇಜ್ ಆಗಿದ್ದಾರೆ. ಅಲ್ಲದೇ ಇಬ್ಬರಿಗೂ ಓರ್ವ ಮುದ್ದಾದ ಮಗು ಕೂಡ ಇದ್ದಾನೆ. ಆದರೆ, ದೀಪಾಳಿಗೆ ಮೋಸ ಮಾಡಿ ಗುರುಸಿದ್ದಪ್ಪ ಮೂರು ಮದುವೆ ಆಗಿದ್ದು, ಒಬ್ಬರಿಗೊಬ್ಬರಿಗೆ ಗೊತ್ತಿಲ್ಲದ ಮೋಸ ಹೋಗಿದ್ದಾರೆ. ದೀಪಾ ಜೊತೆ ಗುರುಸಿದ್ದಪ್ಪ ಜಗಳ ಮಾಡಿಕೊಂಡಿದ್ದು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವ ಕಾರಣಕ್ಕೆ ದೀಪಾ ಗುರುಸಿದ್ದಪ್ಪನನ್ನು ಬಿಟ್ಟು ತವರು ಮನೆ ಸೇರಿದ್ದಾರೆ. ಇದರ ಬೆನ್ನಲ್ಲೇ ಗುರುಸಿದ್ದಪ್ಪ ಮ್ಯಾಟ್ರಿಮೋನಿಯಾದಲ್ಲಿ ಪರಿಚಿತಗೊಂಡ ಮಂಜುಳಾ ಎಂಬುವವರ ಪರಿಚಯ ಮಾಡಿಕೊಂಡು ಅವರ ಜೊತೆ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿ ಮಂಜುಳಾ ಅವರಿಗೂ ಮೋಸ ಮಾಡಿ ಮೂರನೇ ಮದುವೆ ಆಗಿದ್ದಾನೆ. ಹೀಗಾಗಿ ಮಂಜುಳಾ ಗುರುಸಿದ್ದಪ್ಪ ಅವರ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೇಶದ ಸೇನೆಯಲ್ಲಿ ಇದ್ದುಕೊಂಡಿರುವ ಗುರುಸಿದ್ದಪ್ಪ, ಮೂವರಿಗೂ ಮೋಸ ಮಾಡಿದ್ದಾನೆ. ಮೂವರಿಗೂ ಪ್ರತ್ಯೇಕ ಮನೆಗಳಲ್ಲಿದ್ದುಕೊಂಡು ಅವರ ಜೊತೆ ದೈಹಿಕ ಸಂಪರ್ಕ ಹೊಂದಿದ ಬಳಿಕ ಕೈ ಕೊಡುವ ಕೆಲಸ ಮಾಡುತ್ತಿದ್ದಾನೆ ಎಂದು ಮೋಸ ಹೋದ ಹೆಂಡತಿಯರು ಆರೋಪಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಸಿಗತ್ತಾ? ಕಾದು ನೋಡಬೇಕಿದೆ.
Kshetra Samachara
08/11/2021 02:02 pm