ಧಾರವಾಡ: ಧಾರವಾಡದ ಜನತೆ ದೀಪಾವಳಿ ಸಂಭ್ರಮದಲ್ಲಿದ್ದರೆ, ದೀಪಾವಳಿ ಸಮಯದಲ್ಲೇ ಮಾರುಕಟ್ಟೆಗಳಲ್ಲಿ ಖೋಟಾ ನೋಟಿನ ಹಾವಳಿ ಹೆಚ್ಚಾಗಿದೆ.
ಧಾರವಾಡ ನಗರದಲ್ಲಿ ಈ ನಕಲಿ ನೋಟುಗಳು ಚಲಾವಣೆಯಾಗಿದ್ದು, ವ್ಯಾಪಾರಸ್ಥರೊಬ್ಬರಿಗೆ ಇವುಗಳನ್ನ ಕೊಟ್ಟು ಹೋಗಿದ್ದಾರೆ. ನಗರದ ಎಲೆಕ್ಟ್ರಿಕ್ ವ್ಯಾಪಾರಿಯೊಬ್ಬರಿಗೆ ಎರಡು 500 ಮುಖಬೆಲೆಯ ನೋಟುಗಳನ್ನ ಕೊಟ್ಟು ಹೋಗಿರುವ ದುಷ್ಟರು, ಇನ್ನು ಎಲ್ಲೆಲ್ಲಿ ಈ ನಕಲಿ ನೋಟು ಚಲಾವಣೆ ಮಾಡಿದ್ದಾರೆ. ಗೊತ್ತಿಲ್ಲ. ದೀಪಾವಳಿ ವ್ಯಾಪಾರದ ಗದ್ದಲದಲ್ಲಿದ್ದ ಈ ವ್ಯಾಪಾರಿಗೆ ಯಾರು ಈ ನೋಟುಗಳನ್ನ ಕೊಟ್ಟಿದ್ದಾರೆ ಎಂಬುದೇ ಗೊತ್ತಾಗಿಲ್ಲ. ಹೀಗಾಗಿ ಈ ರೀತಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನಕಲಿ ನೋಟು ಬಂದರೆ ಹೇಗೆ, ಇದಕ್ಕೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Kshetra Samachara
05/11/2021 07:09 pm