ಹುಬ್ಬಳ್ಳಿ: ಇಲ್ಲಿಯ ಸೋನಿಯಾ ಗಾಂಧಿ ನಗರ ನಿಜಾಮಿಯಾ ಟೌನ್ ಕುರಕುರೆ ಫ್ಯಾಕ್ಟರಿ ಹಿಂಭಾಗದ ಬಯಲು ಜಾಗದಲ್ಲಿ ಮಂಗಳವಾರ ಬೆಳಗ್ಗೆ ಇಸ್ಪೀಟ್ ಆಡುತ್ತಿದ್ದ 9 ಜನರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 4,010 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಅಲ್ತಾಫ್ ನಗರದ ಮಹ್ಮದ ರಫೀಕ್ ಡಾಣಿಭಾಗ, ಸಯ್ಯದ ಸಾದಿಕ್ ಖಾದರಿ, ಸಾದಿಕ್ ಅಹ್ಮದ ಮುಲ್ಲಾ, ಜಮೀರ್ ಅಹ್ಮದ ಬಂಕಾಪುರ, ಮುಬಾರಕ್ ಕರಣಾಚಿ, ಸರ್ಫರಾಜ್ ತರಗಾರ, ಅಬ್ದುಲ್ ಮಜೀದ್ ಬೆಂಗಳೂರಿ, ಸಾಹಿಲ್ ಬೆಕಿನಾಳ ಹಾಗೂ ಅಸ್ಲಂ ಕರಣಾಚಿ ಬಂಧಿತ ಆರೋಪಿಗಳು. ಹಣ ಪಣಕ್ಕಿಟ್ಟು ಅಂದರ್- ಬಾಹರ್ ಆಡುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್ ಶ್ಯಾಮರಾಜ್ ಸಜ್ಜನ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/11/2021 08:15 am