ಕುಂದಗೋಳ: ಸಂಬಂಧಿಕರ ಮನೆಗೆ ಬಂದಿದ್ದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಳಿಯ ರಸ್ತೆ ಪಕ್ಕದ ಹೊಲದಲ್ಲಿ ನಡೆದಿದೆ.
ಮೃತ ವ್ಯಕ್ತಿ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಮಾದೇವಪ್ಪ ಹಳ್ಯಾಳ (55) ಎಂದು ತಿಳಿದು ಬಂದಿದ್ದು, ಗುರುವಾರವಷ್ಟೇ ಮಾವನ ಮನೆಗೆ ಬಂದಿದ್ದ ಈತ ಶುಕ್ರವಾರ ಬೆಳಗಿನ ಜಾವ ಹಿರೇಹರಕುಣಿ ರಸ್ತೆ ಪಕ್ಕದ ಹೊಲದಲ್ಲಿ ನೇಣಿಗೆ ಶರಣಾಗಿದ್ದಾನೆ.
ಮೃತ ಮಾದೇವಪ್ಪನ ನೇಣು ಹಾಕಿಕೊಳ್ಳಲು ನಿಜವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲಾ, ಆದರೆ ಸಾಲದ ಹೊರೆ ಪರಿಣಾಮವೇ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾತನಾಡುತ್ತಿದ್ದು ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರಿದಿದೆ.
Kshetra Samachara
30/10/2021 03:15 pm