ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮದ್ವೆಯಾವುದಾಗಿ ನಂಬಿಸಿ ವಂಚನೆ- ಬಿಎಸ್‌ಎಫ್ ಯೋಧನ ವಿರುದ್ಧ ಕೇಸ್‌

ಹುಬ್ಬಳ್ಳಿ: ಮ್ಯಾಟ್ರಿಮೋನಿಯಲ್ಲಿ ಪರಿಚಯಗೊಂಡು ಮದುವೆ ಆಗುವುದಾಗಿ ಹೇಳಿ ನಂಬಿಸಿದ ಬಿಎಸ್ಎಫ್ ಯೋಧನ ವಿರುದ್ಧ ಸಂತ್ರಸ್ತ ಯುವತಿ ಹುಬ್ಬಳ್ಳಿಯ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಧಾರವಾಡದ ಗುರುಸಿದ್ದಪ್ಪ ಶಿರೋಳ ಎಂಬ ಬಿಎಸ್‌ಎಫ್‌ ಯೋಧನ ವಿರುದ್ಧ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಮ್ಯಾಟ್ರಿಮೋನಿಯಲ್ಲಿ ಮೊಬೈಲ್ ನಂಬರ್ ಪಡೆದು ಇಬ್ಬರು ಪರಸ್ಪರ ಮಾತನಾಡಿದ್ದರು. ಹಾಗೆ ಬೆಳೆದ ಸ್ನೇಹದಲ್ಲಿ ಪ್ರೇಮಾಂಕುರವಾಗಿ ಮದುವೆ ಆಗುವ ಮಾತುಕತೆ ಸಹ ನಡೆದಿತ್ತು. ಆದರೆ ಮದುವೆ ಆಗುವುದಾಗಿ ಹೇಳಿದ್ದ ಗುರುಸಿದ್ದಪ್ಪ ಬೇರೊಬ್ಬರ ಜತೆ ಮದುವೆಯಾಗಿ ವಂಚನೆ ಮಾಡಿದ್ದಾನೆ ಎಂದು ಯುವತಿ, ಆರೋಪಿಸಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

Edited By : Vijay Kumar
Kshetra Samachara

Kshetra Samachara

30/10/2021 01:32 pm

Cinque Terre

48.25 K

Cinque Terre

2

ಸಂಬಂಧಿತ ಸುದ್ದಿ