ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ತು ತಿಂಗಳ ಮಗು ಅಸಹಜ ಸಾವು: ವಿಷ ಉಣಿಸಿರುವ ಶಂಕೆ

ಧಾರವಾಡ: ಅಸಹಜ ರೀತಿಯಲ್ಲಿ ಹತ್ತು ತಿಂಗಳ ಮಗುವೊಂದು ಸಾವಿಗೀಡಾಗಿದ್ದು, ಮಗುವಿಗೆ ವಿಷ ಉಣಿಸಿರುವ ಶಂಕೆ ವ್ಯಕ್ತವಾಗಿದೆ.

ಧಾರವಾಡ ತಾಲೂಕಿನ ಗೊಂಗಡಿಕೊಪ್ಪದಲ್ಲಿ ನಿನ್ನೆ ಈ ಘಟನೆ ನಡೆದಿದೆ. ತನ್ವೀರ್ ಎಂಬ ಹತ್ತು ತಿಂಗಳ ಮಗು ಸಾವಿಗೀಡಾಗಿದೆ.

ಘಟನೆ ಸಂಬಂಧ ಮಗುವಿನ ತಂದೆ, ತಾಯಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ನಿನ್ನೆ ಅಸ್ವಸ್ಥಗೊಂಡಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಮಗು ಸಾವನ್ನಪ್ಪಿದೆ.

ಮಗುವಿನ ಶವದಿಂದ ವಾಸನೆ ಬಂದಿದ್ದರಿಂದ ಮಗುವಿಗೆ ವಿಷ ಉಣಿಸಿರಬಹುದು ಎಂದು ಮಗುವಿನ ತಂದೆ ತನ್ನ ಪತ್ನಿ ಮೇಲೆ ಆರೋಪ ಮಾಡಿದ್ದಾರೆ. ತಮ್ಮಿಬ್ಬರ ಜಗಳದ ನಡುವೆ ಸದ್ಯ ಮಗು ಸಾವಿಗೀಡಾಗಿದ್ದು, ಘಟನೆ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಪೊಲೀಸರು ಮರಣೋತ್ತರ ಪರೀಕ್ಷೆ ವರದಿಯನ್ನ ಎಫ್‌ಎಸ್ಎಲ್‌ಗೆ ಕಳುಹಿಸಲು ನಿರ್ಧರಿಸಿದ್ದು, ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಸದ್ಯ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಇದನ್ನು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/10/2021 08:28 pm

Cinque Terre

46.84 K

Cinque Terre

4

ಸಂಬಂಧಿತ ಸುದ್ದಿ