ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ: ರಸ್ತೆಯಲ್ಲಿ ಹೊಡೆದಾಡಿದವರು ಅಂದರ್..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಸಲಗ ಸಿನಿಮಾ ನೋಡಲು ಬಂದವರು ರಸ್ತೆ ಮಧ್ಯದಲ್ಲಿಯೇ ಹೊಡೆದಾಟ ನಡೆದು, ಗಲಾಟೆಯ ವಾತಾವರಣ ನಿರ್ಮಾಣ ಮಾಡಿದ್ದರು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಗಮನಕ್ಕೆ ತಂದಿದ್ದು, ವರದಿಯಿಂದ ಎಚ್ಚೇತ್ತುಕೊಂಡು ಪೊಲೀಸ್ ಇಲಾಖೆ ರಸ್ತೆ ಮಧ್ಯದಲ್ಲಿ ಹೊಡೆದಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಸಲಗ ಸಿನಿಮಾ ನೋಡಲು ಬಂದಾಗ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಹೊಡದಾಡಿ, ಯುವಕನೋರ್ವನಿಗೆ ಹಿಗ್ಗಾ‌ಮುಗ್ಗಾ ಥಳಿಸಿದ ಘಟನೆ ಕುರಿತು, ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ತೆರೆ ಕಂಡ ಸಲಗ ಸಿನಿಮಾ ನೋಡಲು ಬಂದಿದ್ದ ಎರಡು ಗುಂಪುಗಳು, ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿರುವ ವೀಡಿಯೋ ಸಮೇತ, ಪಬ್ಲಿಕ್ ನೆಕ್ಸ್ಟ್ ನಲ್ಲಿ ಸುದ್ದಿ ಬಿತ್ತರವಾಗಿತ್ತು. ಇನ್ನೂ ಘಟನಾ ಸ್ಥಳಕ್ಕೆ ಕೂಡಲೇ ದೌಡಾಯಿಸಿದ ಪೊಲೀಸರು ಆರೋಪಿಗಳಾದ ಕೃಷ್ಣಾಪೂರ ಓಣಿಯ ಮಹಮ್ಮದ ಅಂಚಟಗೇರಿ, ಹುಸೇನ ಅಂಚಟಗೇರಿ ಎಂಬುವವರನ್ನು ಬಂಧಿಸಿ‌ ಜಗಳಕ್ಕೆ ಕಾರಣವೇನೆಂದು ಎಂದು ತನಿಖೆ ನಡೆಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

16/10/2021 11:08 am

Cinque Terre

45.35 K

Cinque Terre

11

ಸಂಬಂಧಿತ ಸುದ್ದಿ