ಹುಬ್ಬಳ್ಳಿ: ಮನೆಗೆ ಹಾರ್ಡ್ ವೇರ್ ಸಾಮಾನುಗಳನ್ನು ಖರೀದಿಸಲು ಬಂದ ಖದೀಮರು ಅಂಗಡಿ ಮಾಲೀಕನ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ಜನತಾ ಬಜಾರ್ ನಲ್ಲಿರುವ ಕಾಂಚನ ಪ್ಲೈವುಡ್ ಆ್ಯಂಡ್ ಹಾರ್ಡವೇರ್ ನಲ್ಲಿ ನಡೆದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ನಾಗರಾಜ ಪೂಜಾರಿ ಎಂಬುವವರ ಅಂಗಡಿಗೆ ರಾಣೆಬೇನ್ನೂರ ಮೂಲದವರು ಎಂದು ಹೇಳಿಕೊಂಡು ಮನೆಗೆ ಸಾಮಾನುಗಳನ್ನು ಖರೀದಿಸಲು ಬಂದ ಇಬ್ಬರು, 3500 ರೂಪಾಯಿ ಸಾಮಾನುಗಳನ್ನು ಖರೀದಿಸಿ ಬಳಿಕ ಮೊಬೈಲ್ ಕಳ್ಳತನ ಮಾಡಿಕೊಂಡ ಎಸ್ಕೇಪ್ ಆಗಿದ್ದಾರೆ. ಕಳ್ಳರ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
30000 ರೂಪಾಯಿ ಮೌಲ್ಯದ Vivo x one pro ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
12/10/2021 11:00 am