ಹುಬ್ಬಳ್ಳಿ: ಟಿಪ್ಪರ್ ಚಾಲಕ ಮತ್ತು ಪಾದಚಾರಿಗಳ ನಡುವೆ ಕೈ ಮಿಲಾಸುವ ಘಟನೆಯೊಂದು, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಮುಂದೆ ನಡೆದಿದೆ.
ಟಿಪ್ಪರ್ ವಾಹನ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದ, ಸಿಗ್ನಲ್‌ಗೆ ಕೂಡ ಕ್ಯಾರೆ ಎನ್ನದೆ ಹೋಗುತ್ತಿದ್ದಾಗ ಜನರು ಭಯಗೊಂಡು ಕೂಗಾಡಿದಾಗ ವಾಹನ ನಿಲ್ಲಿಸಿದ್ದಾನೆ. ನಂತರ ಸಾರ್ವಜನಿಕರು ಬಂದು ಆ ವಾಹನ ಚಾಲಕನ ಜೊತೆ ವಾಗ್ವಾದಕ್ಕೆ ಇಳಿದು, ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಲು ಮುಂದಾದಾಗ ಕೆಲ ಜನರು ಬಂದು ಸಮಾಧಾನ ಮಾಡಿ ಕಳಿಸಿದ್ದಾರೆ.
Kshetra Samachara
27/09/2021 05:03 pm