ಹುಬ್ಬಳ್ಳಿ: ಅವರೆಲ್ಲಾ ಸರ್ಕಾರದ ಖಜಾನೆಗೆ ಸೇರಬೇಕಾಗಿದ್ದ ಹಣವನ್ನು ನುಂಗಿ ನೀರು ಕುಡಿದಿದ್ದರು. ಲಕ್ಷಾಂತರ ಹಣ ಲೂಟಿ ಮಾಡಿದ್ದರೂ ಕೂಡ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಪ್ರಕರಣ ಮುಚ್ಚಿ ಹಾಕುವ ಬಿಗ್ ಫ್ಲ್ಯಾನ್ ನಡೆಸಿದ್ದಾರೆ. ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಧಾರವಾಡದ ಪಶ್ಚಿಮ ಆರ್.ಟಿ.ಓ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರದ ಹೌಸ್ ಆಗಿದೆ. ಕಳೆದ ಎರಡು ಮೂರು ತಿಂಗಳಿಂದ ಸಾರ್ವಜನಿಕರಿಂದ ಕಟ್ಟಿಸಿಕೊಂಡಿದ್ದ ದಂಡದ ಹಣವನ್ನು ಇಲ್ಲಿನ ಅಧಿಕಾರಿಗಳು ನುಂಗಿ ನೀರು ಕುಡಿದ್ದಿದ್ದರು. ಲಕ್ಷ ಲಕ್ಷ ಹಣವನ್ನು ಸಾರಿಗೆ ಇಲಾಖೆಯ ಖಜಾನೆಗೆ ತುಂಬುವ ಬದಲು ತಮ್ಮ ಜೇಬು ತುಂಬಿ ಕೊಂಡಿದ್ದರು. ಆದರೆ ಪ್ರಕರಣ ಬೆಳಕಿಗೆ ಬಂದು ಎರಡು ಮೂರು ತಿಂಗಳು ಕಳೆಯುತ್ತಾ ಬಂದರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗೇ ಖುದ್ದು ಮೇಲಾಧಿಕಾರಿಗಳೇ ಮುಚ್ಚಿ ಹಾಕುವ ಲೆಕ್ಕಕ್ಕೆ ಬಂದಿದ್ದಾರೆ. ಯಾಕೆಂದರೆ ಇವರು ಮಾಡಿದ ಪಾಪದ ಹಣದಲ್ಲಿ ಮೇಲಾಧಿಕಾರಿಗಳಿಗೂ ಪಾಲು ನೀಡಿದ್ದರಂತೆ. ಹೀಗಾಗೇ ಕೇವಲ ಐದು ಜನರಿಗೆ ನೋಟೀಸ್ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಸದ್ಯ ಬೆಳಗಾವಿಯ ಜಾಯಿಂಟ್ ಕಮೀಷನ್ ನಡೆಸಿದ ಆಂತರಿಕ ತನಿಖೆಯಲ್ಲಿ ಸುಮಾರು 11 ಲಕ್ಷ ಗುಳುಂ ಮಾಡಿದ್ದು, ಬಯಲಾಗಿದೆ. ಆದರೆ ಇಲ್ಲಿನ ಅಧಿಕಾರಿಗಳನ್ನು ಕೇಳಿದರೆ ಪ್ರಕರಣ ಪ್ರಾಥಮಿಕ ಹಂತದಲ್ಲಿದ್ದು, ಏನನ್ನು ಹೇಳಲು ಬರುವುದಿಲ್ಲ ಎನ್ನುತ್ತಾರೆ.
ಒಟ್ಟಿನಲ್ಲಿ ಸಾರ್ವಜನಿಕರ ವಾಹನಗಳಿಗೆ ಅಗತ್ಯ ದಾಖಲೆ ಇಲ್ಲದ ಹಿನ್ನಲೆ ಅವುಗಳಿಗೆ ದಂಡ ವಿಧಿಸುತ್ತಿದ್ದ ಅಧಿಕಾರಿಗಳು, ಅವರಿಗೆ ಚಲನ್ ನೀಡಿ ಮತ್ತೇ ಅದನ್ನು ಕ್ಯಾನ್ಸಲ್ ಮಾಡುತ್ತಿದ್ದರು, ಬ್ಯಾಂಕ್ ಚಲನ್ ಮೂಲಕ ಖಜಾನೆಗೆ ಹೋಗಬೇಕಾದ ಹಣವನ್ನು ವಾಹನ ಸಂಖ್ಯೆ ತಪ್ಪಾಗಿದೆ,ವಾಹನ ಮಾಲೀಕರ ಹೆಸರು ತಪ್ಪಾಗಿದೆ ಅಂತ ಚಲನ್ ಕ್ಯಾನ್ಸಲ್ ಮಾಡಿ ಜನರಿಂದ ವಸೂಲಿ ಮಾಡಿ, ತಮ್ಮ ಜೇಬಿಗಿಳಿಸಿದ್ದರು. ಸುಮಾರು ಮೂರ್ನಾಲ್ಕು ತಿಂಗಳ ಅವ್ಯವಹಾರ ಮಾತ್ರ ಸದ್ಯ ಬಯಲಾಗಿದೆ. ಆದರೆ ಉನ್ನತ ಮಟ್ಟದ ತನಿಖೆಗೆ ಇಳಿದರೆ ಈ ಭ್ರಷ್ಟರ ಬ್ರಹ್ಮಾಂಡ ಕಹಾನಿ ಬಯಲಾಗೋದು ಗ್ಯಾರಂಟಿ.
ಸದ್ಯ ಇಲ್ಲಿನ ಆರ್.ಟಿ.ಓ ಅಧಿಕಾರಿಗಳು ಬೆಳಗಾವಿಯ ಮೇಲಾಧಿಕರಿಗಳಿಗೆ ವರದಿ ನೀಡಿದ್ದಾರೆ. ಆದರೆ ಐದು ಜನ ಸಿಬ್ಬಂದಿಗಳಿಗೆ ನೋಟಿಸ್ ನೀಡಿದ್ದು, ಬಿಟ್ಟರೆ ಅವರಿಂದ ಸರ್ಕಾರದ ಖಜಾನೆಗೆ ದೋಖಾದ ಹಣ ವಾಪಸ್ ಆಗಿಲ್ಲ. ಅದೇ ಏನೇ ಇರಲಿ ಸರ್ಕಾರದ ಸಂಬಳ ತಿಂದು ಸರ್ಕಾರಕ್ಕೆ ಮೋಸ ಮಾಡಿದ್ದು ಎಷ್ಟು ಸರಿ ನೀವೆ ಹೇಳಿ.
Kshetra Samachara
23/09/2021 06:05 pm