ಹುಬ್ಬಳ್ಳಿ: ಅವಳಿನಗರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಫ್ರೆಂಡ್ಸ್ ಜೊತೆಗೆ ಪ್ಯಾಮಿಲಿ ಜೊತೆಗೆ ಹೊಟೇಲ್ ಗೆ ಹೋದರು ಕೂಡ ಸಮಸ್ಯೆ ಮಾತ್ರ ಎದುರಾಗುತ್ತಲೇ ಇದೆ. ಕಮೀಷನರೇಟ್ ಸಾಕಷ್ಟು ಕ್ರಮಗಳನ್ನು ಕೈಗೊಂಡರು ಕೂಡ ಪುಂಡರ ಹಾವಳಿ ಮಾತ್ರ ತಗ್ಗಿಲ್ಲ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಇಲ್ಲಿ ತೋರಸ್ತೀವಿ ನೋಡಿ ರೋಚಕ ಕಹಾನಿ...
ಹುಬ್ಬಳ್ಳಿಯಲ್ಲಿ ಮಹಿಳೆಯರು ಭಯದಲ್ಲಿಯೇ ಓಡಾಡುವಂತಾಗಿದೆ. ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಹೊರಗಡೆ ಹೋದರು ಭಯದ ವಾತಾವರಣದಲ್ಲಿ ಇರಬೇಕಾಗಿದೆ. ಹೌದು...ಮೊನ್ನೆಯಷ್ಟೆ ಗೋಕುಲ ರೋಡ್ ನಲ್ಲಿರುವ ಐಸ್ ಕ್ಯೂಬ್ ಹೊಟೇಲ್ ನಲ್ಲಿ ನಡೆದ ಪ್ರಕರಣವನ್ನೊಮ್ಮೆ ನೋಡಿದರೇ ನಿಜಕ್ಕೂ ಎಂತಹವರಿಗೂ ಬೇಸರ ಮೂಡುತ್ತದೆ. ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಹುಬ್ಬಳ್ಳಿಯ ನಿವಾಸಿಗಳಾದ ಆರ್.ಜೆ. ಮೇಘಾ ಹಾಗೂ ಆತನ ಪತಿ ಪ್ರವೀಣ ಮೇಲೆ ಹಲ್ಲೆ ಮಾಡಲಾಗಿದೆ. ಇನ್ನೂ ಗಲಾಟೆಯ ಬಗ್ಗೆ ಆರ್.ಜೆ. ಮೇಘಾ ಅವರು ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ ಕೇಳಿ..
ಊಟ ಮುಗಿಸಿಕೊಂಡು ಹೊರ ಬರುತ್ತಿದ್ದಂತೆಯೇ ಒಳಗಡೆ ಗಲಾಟೆ ನಡೆದಿದ್ದು, ಕೃತಿಕಾ ಎಂಬುವವರ ಜೊತೆಗೆ ಫುಂಡರು ಅನುಚಿತವಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಮೇಘಾ ಅವರ ಪತಿ ಕೃತಿಕಾಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಇದೇ ವೇಳೆಯಲ್ಲಿ ಪ್ರವೀಣ ವೆಂಕಟೇಶ ಹಾಗೂ ಆರ್.ಜೆ.ಮೇಘಾ ಮೇಲೆ ಹಲ್ಲೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಗೋಕುಲ ರೋಡ್ ಪೋಲಿಸ್ ಠಾಣೆಯ ಪೊಲೀಸರು ಹಲ್ಲೆ ಮಾಡಿದ ಐವರನ್ನು ಹೆಡೆಮುರಿ ಕಟ್ಟಿದ್ದಾರೆ. ಸಹಾದೇವ ಹಿರೇಕೂರು, ಶೈಲೇಶ್ ಹರಿವಾಣ, ಆಸೀಸ್ ಕೊರವಾರ
ಶ್ರೀನಿವಾಸ್ ಪೂಜಾರ್, ಅಕ್ಷಯ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಈ ಘಟನೆ ಕುರಿತು ಮತ್ತಷ್ಟು ಮಾಹಿತಿಗಳು ನಿಮ್ಮ ಮುಂದಿದೆ ಕೇಳಿ..
ಒಟ್ಟಿನಲ್ಲಿ ಪುಂಡರ ಹಾವಳಿಗೆ ದಂಪತಿಗಳಿಬ್ಬರೂ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಶಿಸ್ತು ಕ್ರಮಗಳನ್ನು ಕೈಗೊಂಡಿರುವ ಹು-ಧಾ ನಗರ ಪೊಲೀಸ್ ಕಮೀಷನರೇಟ್ ಇನ್ನೂ ಹೆಚ್ಚಿನ ರಕ್ಷಣೆಯನ್ನು ಮಹಿಳೆಯರಿಗೆ ಕೊಡುವ ಮೂಲಕ ಪುಂಡರ ಹಾವಳಿಗೆ ಬ್ರೇಕ್ ಹಾಕಬೇಕಿದೆ.
Kshetra Samachara
22/09/2021 11:56 am