ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮವಾಗಿ ಮರಳು ದಂಧೆ: ಬ್ರೇಕ್ ಹಾಕಬೇಕಿದೆ ಜಿಲ್ಲಾಡಳಿತ.!

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ‌ ಆದರಹಳ್ಳಿ ಹಾಗೂ ನಾದಿಗಟ್ಟಿ‌ ಗ್ರಾಮದಲ್ಲಿ ದಿನನಿತ್ಯವೂ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಹೊರ ತಾಲೂಕಿನ ಟ್ರಕ್ ಹಾಗೂ ಟ್ರ್ಯಾಕ್ಟರಗಳು ಬಂದು ಮರಳು ದಂಧೆ ನಡೆಸುತ್ತಿದ್ದಾರೆ.

ಈ‌‌ ಮರಳು ಅಕ್ರಮ ದಂಧೆಕೋರರು ಇದಕ್ಕೆ‌ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಹಾಗೂ ಪೊಲೀಸರು ಅವರಿಗೆ ಸಹಾಯ ಮಾಡುತ್ತಿದ್ದರಿಂದ ಈ‌‌ ರೀತಿ‌ ಆಗುತ್ತಿದೆ ಎಂದು ಸ್ಥಳೀಯರ ಆರೋಪಿಸಿದ್ದಾರೆ. ದಿನನಿತ್ಯವೂ ಆದರಹಳ್ಳಿ ಹಾಗೂ ನಾದಿಗಟ್ಟಿ‌ ಗ್ರಾಮದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ ಜವಳು ಪ್ರದೇಶ ಹಾಗೂ ಬೆಟ್ಟಗುಡ್ಡಗಳಲ್ಲಿ‌‌ ಮರಳನ್ನು ತೆಗೆದು ಮಾರಾಟ ಮಾಡುತ್ತಿದ್ದಾರೆ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು‌ ಕುಳಿತುಕೊಂಡಿದ್ದಾರೆ.

ಮರಳು ದಂಧೆಕೋರರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಾಮೂಲಿ ನೀಡುತ್ತಿದ್ದು, ಹಣದ ಆಸೆಗೆ ರೈತರ ಜಮೀನು ಹಾಳು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಹಾಗೂ ನಾದಿಗಟ್ಟಿ ಗ್ರಾಮಗಳಲ್ಲಿ ಜವಳು ಪ್ರದೇಶಗಳಲ್ಲಿ ದೊಡ್ಡ ದೊಡ್ಡ‌ ಹೊಂಡದಂತೆ ಮರಳು‌ ತೆಗೆದು ಎಲ್ಲಾ ಜಮೀನುಗಳಲ್ಲಿ ಗುಂಡಿಗಳು ಗುಂಡಿಗಳು ನಿರ್ಮಾಣವಾಗಿವೆ. ಆದ್ದರಿಂದ ಸಂಬಂಧಿಸಿದ ಜಿಲ್ಲಾ ಅಧಿಕಾರಗಳು ಪರಿಶೀಲನೆ ಮಾಡಿ ಅವರ ಮೇಲೆ ಪ್ರಕರಣ ದಾಖಲು ಮಾಡಲಿ ಎನ್ನುವುದು ಎರಡು‌ ಗ್ರಾಮದ ರೈತರ ಒತ್ತಾಯವಾಗಿದೆ.

Edited By : Shivu K
Kshetra Samachara

Kshetra Samachara

14/09/2021 04:25 pm

Cinque Terre

75.21 K

Cinque Terre

1

ಸಂಬಂಧಿತ ಸುದ್ದಿ