ಹುಬ್ಬಳ್ಳಿ: ವ್ಯಕ್ತಿಯೊಬ್ಬರು ಮನೆಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಮನೆಯ ಪಕ್ಕದ ಸ್ನಾನದ ಕೋಣೆಯಲ್ಲಿಟ್ಟು ಹೋಗಿದ್ದನ್ನು ಗಮನಿಸಿದ ಅಪರಿಚಿತರು, ಸಲೀಸಾಗಿ ಕಳವು ಮಾಡಿರುವ ಘಟನೆ, ನಗರದ ಮರಾಠಾಗಲ್ಲಿ ಗಜಾನನ ಹೋಟೆಲ್ ಪಕ್ಕದ ಮನೆ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿ ನಡೆದಿದೆ.
ರಾಜೇಶ ಮಾನೆ ಎಂಬುವವರಿಗೆ ಸೇರಿದ್ದ ಮನೆ ಇದಾಗಿದ್ದು, ಸಂಜೆ ಮನೆಗೆ ಬೀಗ ಹಾಕಿ , ಪಕ್ಕದ ಬಾತ್ ರೂಂನಲ್ಲಿ ಕೀಲಿ ಇಟ್ಟು ತೆರಳಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಕೀಲಿಯನ್ನು ಬಳಸಿಕೊಂಡು ಮನೆ ಒಳಗೆ ನುಗ್ಗಿ. ಟಿಜೋರಿ ಮೇಲಿಟ್ಟಿದ್ದ ಕೀಲಿಯೂ ಅವರಿಗೆ ಸಿಕ್ಕಿತ್ತು. 8 ಗ್ರಾಂ ಚಿನ್ನಾಭರಣ , 51,000 ರೂ . ನಗದು ಹಾಗೂ 1 ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
14/09/2021 11:38 am