ಧಾರವಾಡ: ಧಾರವಾಡ ಹೊಯ್ಸಳ ನಗರದ ಬಳಿಯ ನಟರಾಜ್ ವೈನ್ ಶಾಪ್‌ಗೆ ರಾತ್ರೋರಾತ್ರಿ ನುಗ್ಗಿದ ಕಳ್ಳನೋರ್ವ ಬರೋಬ್ಬರಿ 3 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೆ.9ರಂದು ಈ ಘಟನೆ ನಡೆದಿದೆ. ವೈನ್ ಶಾಪ್ನಲ್ಲಿದ್ದ 3 ಲಕ್ಷ ರೂಪಾಯಿ, ಮದ್ಯದ ಬಾಟಲಿಗಳನ್ನೂ ಕಳ್ಳ ಹೊತ್ತೊಯ್ದಿದ್ದಾನೆ.
ನಟರಾಜ್ ವೈನ್ ಶಾಪ್ ಆರ್.ಎಸ್.ಪ್ರಭಾಕರ್ ಎಂಬುವವರಿಗೆ ಸೇರಿದ್ದಾಗಿದೆ. ಕಳ್ಳ ಮೊದಲು ಹಣ ತೆಗೆದುಕೊಂಡು ಹೋಗಿದ್ದಾನೆ. ನಂತರ ಮದ್ಯದ ಬಾಟಲಿಗಳನ್ನು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
11/09/2021 08:59 pm