ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 1.05 ಲಕ್ಷ ಮೊತ್ತದ ಖೋಟಾ ನೋಟು ಸಮೇತ ವ್ಯಕ್ತಿ ಸೆರೆ ಹಿಡಿದ ರೈಲ್ವೆ ಪೊಲೀಸರು

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದ ಪಾರ್ಸಲ್ ಕಚೇರಿ ಬಳಿಯ ಪಾರ್ಕ್‌ನಲ್ಲಿ, 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಓರ್ವನನ್ನು, ರೈಲ್ವೆ ಠಾಣೆ ಪೊಲೀಸರು ಬಂಧಿಸಿ, ಆತನಿಂದ 1.05 ಲಕ್ಷ ರೂ . ಮೌಲ್ಯದ 210 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಂದಗೋಳ ತಾಲೂಕು ಮಳಲಿ ಗ್ರಾಮದ ಹರೀಶ ಎಂ ಭೋವಿ ಬಂಧಿತನಾಗಿರುವ ಆರೋಪಿ, ಈತ ಸಾರ್ವಜನಿಕರಿಗೆ ಅಸಲಿ ನೋಟುಗಳೆಂದು ನಂಬಿಸಿ ಚಲಾವಣೆ ಮಾಡುತ್ತಿದ್ದ ಈ ಕುರಿತು ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸ್ ಠಾಣೆ ಪಿಎಸ್‌ಐ ಸತ್ಯಪ್ಪ ಮುಕ್ಕಣ್ಣವರ ಹರೀಶನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ, ಆತನ ಬಳಿ 500 ರೂ.ಮುಖಬೆಲೆಯ ಒಟ್ಟು 210 ನಕಲಿ ನೋಟುಗಳು ಸಿಕ್ಕಿವೆ ,ಕೂಡಲೇ ಅವನನ್ನು ಬಂಧಿಸಿ , ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ . ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಯಲ್ಲಪ್ಪ ತಳವಾರ , ರಮೇಶ ಲಮಾಣಿ , ಸುಭಾಸ ದಳವಾಯಿ , ವೀರಪ್ಪ ಅಗಡಿ , ಮಾಳಪ್ಪ ಪೂಜಾರಿ ಪಾಲ್ಗೊಂಡಿದ್ದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

16/08/2021 12:22 pm

Cinque Terre

39.2 K

Cinque Terre

3

ಸಂಬಂಧಿತ ಸುದ್ದಿ