ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಪ್ರಾಪ್ತೆ ಮೇಲೆ ಕಾಮುಕ ಯುವಕನಿಂದ ರೇಪ್

ಕುಂದಗೋಳ: ನೀರು ತರಲು ಮನೆ ಪಕ್ಕದ ನಲ್ಲಿಗೆ ತೆರಳಿದ್ದ ಅಪ್ರಾಪ್ತೆ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಘಟನೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಂಗಳವಾರ ರಾತ್ರಿಯೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯರಗುಪ್ಪಿ ಗ್ರಾಮದ 23 ವರ್ಷದ ಯುವಕನೋರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಷ್ಟೇ ಅಲ್ಲದೆ ತನ್ನ ಕೃತ್ಯವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದಾನೆ.

ಘಟನೆ ಬಳಿಕ ಗುರುವಾರ ಅಸ್ವಸ್ಥಗೊಂಡ ಬಾಲಕಿಯನ್ನು ಮನೆಯವರು ವಿಚಾರಣೆ ನಡೆಸಿದಾಗ ಪಾಲಕರಿಗೆ ವಿಚಾರ ತಿಳಿದಿದೆ. ಸದ್ಯ ಬಾಲಕಿಯನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಲಾಗಿದೆ.

ಶಾಸಕರ ತವರೂರಿನಲ್ಲೇ ಅಪ್ರಾಪ್ತೆ ಮೇಲೆ ನಡೆದ ದೌರ್ಜನ್ಯ ಇಡೀ ತಾಲೂಕಿನಲ್ಲಿ ಸಂಚಲನ ಸೃಷ್ಟಿಸಿದ್ದು, ಪೊಲೀಸ್ ಇಲಾಖೆ ಹೆಣ್ಣಿನ ರಕ್ಷಣೆಗೆ ಏನು ಕ್ರಮ ರೂಪಿಸಿದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

13/08/2021 02:22 pm

Cinque Terre

62.1 K

Cinque Terre

19

ಸಂಬಂಧಿತ ಸುದ್ದಿ