ಹುಬ್ಬಳ್ಳಿ: ಹೀಗೆ ಇದ್ದೊಬ್ಬ ಮಗನನ್ನು ನೆನೆದು ಕಣ್ಣೀರಿಡುತ್ತಿರುವ ಕುಟುಂಬಸ್ಥರು. ನಿನ್ನೆ ಇದ್ದ ಮಗ ಇಂದು ಇಲ್ಲ ಅಂತ ಮಗನನ್ನ ಕಳೆದುಕೊಂಡು ಮುಂದೇನು ಎನ್ನುವ ಆತಂಕದಲ್ಲಿ ತಾಯಿ. ಹೌದು ಈ ದೃಶ್ಯಗಳು ಕಂಡು ಬಂದದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರದ ಬಳಿ. ಮೊನ್ನೆ ಅಷ್ಟೇ ಅಂದ್ರೆ ರವಿವಾರ ಮಧ್ಯಾಹ್ನದಂದು ವಿಜಯಾನಂದ ಎನ್ನುವ ವಿಚಾರಾಧಿನ ಖೈದಿ ಜೈಲಿನಿಂದ ಪರಾರಿಯಾಗಿದ್ದ. ಅಷ್ಟೊಂದು ಭದ್ರತೆಯೇ ನಡುವೆಯೇ ಆತ ಎಸ್ಕೇಪ್ ಆಗಿ ಅಣ್ಣಿಗೇರಿ ಪಟ್ಟಣದ ತಮ್ಮ ಸಂಬಂಧಿಕರ ಮನೆಯಲ್ಲಿ ಒಂದು ದಿನ ಇದ್ದ. ಆದ್ರೆ ಆತ ಜೈಲಿನಿಂದ ಎಸ್ಕೇಪ್ ಆದ ಮೇಲೆ, ಆತನನ್ನ ಹಿಡಿಯಲು ಪೊಲೀಸರು ವಿಶೇಷ ತಂಡ ರಚನೆ ಮಾಡಿ ಹುಡುಕಾಟ ಸಹ ಆರಂಭಿಸಿದ್ರು. ಇದೆ ವೇಳೆ ನಿನ್ನೆ ಆತನ ಶವ ಅಣ್ಣಿಗೇರಿ ಬಳಿಯ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಎರಡು ತುಂಡಾಗಿ ಸಿಕ್ಕಿದೆ.
ವಿಜಯಾನಂದ ಜೀವನವೇ ಬೇಸತ್ತು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ರೆ ಈ ಆತ್ಮಹತ್ಯೆಗೆ ಕಾರಣವೇ ಜೈಲರ್ ಎನ್ನುವ ಗಂಭೀರ ಆರೋಪವನ್ನ ಸದ್ಯ ಮೃತ ವಿಜಯಾನಂದ ತಾಯಿ ಮತ್ತು ಸಂಬಂಧಿಕರ ಮಾಡುತ್ತಿದ್ದಾರೆ.
2014ರಲ್ಲಿ ಕುಂದಗೋಳ ವ್ಯಾಪ್ತಿಯಲ್ಲಿ ಕುರಿ ಕದಿಯಲು ಹೋದಾಗ, ಅಲ್ಲಿನ ಇಬ್ಬರು ಕುರಿಗಾಹಿಗಳ ಹತ್ಯೆ ಆಗಿತ್ತು. ಆ ವೇಳೆ ಬಂಧಿತನಾಗಿದ್ದ ವಿಜಯಾನಂದ ಇಲ್ಲಿಯವರೆಗೂ ಕೇಸ್ ಶಿಕ್ಷೆ ಸಹ ಪ್ರಕಟ ಆಗದೆ, ಹುಬ್ಬಳ್ಳಿಯ ಸಬ್ ಜೈಲ್ ನಲ್ಲಿಯೇ ಇದ್ದ. ಆದ್ರೆ ಇಲ್ಲಿ ಆತನಿಗೆ ಮೇಲಧಿಕಾರಿಗಳ ಕಿರುಕುಳ ಹೆಚ್ಚಿತ್ತು ಅಂತ ಆತ ಮನೆಯವರಿಗೆ ಪದೇ ಪದೇ ಹೇಳುತ್ತಿದ್ದನಂತೆ. ಅಲ್ಲದೆ ಹುಬ್ಬಳ್ಳಿಯಿಂದ ಧಾರವಾಡ ಜೈಲಿಗೆ ಶಿಫ್ಟ್ ಮಾಡಿ ಎಂದ್ರು ಸಹ ಮಾಡಲು ಮಾತ್ರ ಅಧಿಕಾರಿಗಳು ಒಪ್ಪುತ್ತಿರಲಿಲ್ಲ. ಇನ್ನು ಸ್ಥಳಾಂತರಕ್ಕೆ ಲಕ್ಷಾಂತರ ಹಣ ಕೊಡು ಅಂತ ಕೇಳ್ತಿದ್ರು ಅಂತ ಸಂಬಂಧಿಕರು ಆರೋಪ ಮಾಡಿದ್ದಾರೆ.
ಒಟ್ಟಾರೆ ಇನ್ನೇನು ಕೆಲ ವರ್ಷ ಕಳೆದಿದ್ರೆ ಜೈಲುವಾಸವೆ ಮುಗಿದು ಹೋಗ್ತಿತ್ತು. ಆತುರಕ್ಕೆ ಬಿದ್ದ ವಿಜಯಾನಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ. ಇನ್ನೇನು ಮಗ ಜೈಲಿನಿಂದ ಬರ್ತಾನೆ ಅಂತ ಕಾದು ಕುಳಿತಿದ್ದ ತಾಯಿಯ ಆಕ್ರಂದನ ಮಾತ್ರ ಮುಗಿಲು ಮುಟ್ಟಿದ್ದು, ಮುಂದಿನ ಜೀವನ ಹೇಗೆ ಅನ್ನೋದೆ ಅವರ ಮುಂದಿನ ದೊಡ್ಡ ಪ್ರಶ್ನೆಯಾಗಿದೆ.
-ಈರಣ್ಣ ವಾಲಿಕಾರ ಪಬ್ಲಿಕ್ ನೆಕ್ಸ್ಟ್,
Kshetra Samachara
05/08/2021 03:51 pm