ಹುಬ್ಬಳ್ಳಿ: ಹತ್ಯೆ ಇಂತಹ ಸಣ್ಣ ಕಾರಣಕ್ಕೂ ಆಗುತ್ತಾ..? ಸಣ್ಣ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿ ಹತ್ಯೆಯಲ್ಲಿ ಅಂತ್ಯವಾಗಿದ್ದ ಪ್ರಕರಣ ಇದೀಗ ಶಿಕ್ಷೆಯ ಮೂಲಕ ಅಂತ್ಯಕಂಡಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ವ್ಯಕ್ತಿಯ ಹತ್ಯೆಗೈದಿದ್ದ ಹಂತಕರಿಗೆ ಇದೀಗ ಜೈಲುಟವೇ ಗತಿಯಾಗಿದೆ.
2019 ರಲ್ಲಿ ನಡೆದಿದ್ದ ಆ ಒಂದು ಹತ್ಯೆ ವಾಣಿಜ್ಯ ನಗರಿಯ ಜನರನ್ನೇ ಬೆಚ್ಚಿಬಿಳಿಸಿತ್ತು. ಜನ ಇಂತಹ ಕಾರಣಕ್ಕೆ ಹತ್ಯೆಯಾಗುತ್ತಾ ಅಂತ ಹೌಹಾರಿದ್ದರು. ಹೌದು ಹುಬ್ಬಳ್ಳಿಯ ಕೇಶ್ವಪುರದ ಕ್ಲಬ್ ರೋಡ್ ನ ರೈಲ್ವೆ ಪಾರ್ಕಿಂಗ್ ಸ್ಥಳದಲ್ಲಿ ನಡೆದಿದ್ದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಉತ್ತಮ ಬೊಂಗಾಳೆ ಎನ್ನುವ ವ್ಯಕ್ತಿ ತನ್ನ ದ್ವಿಚಕ್ರ ವಾಹನವನ್ನು ಪಾರ್ಕಿಂಗ್ ನಿಂದ ತೆಗೆಯುವಾಗ ಅಲ್ಲಿಯೇ ಇದ್ದ ಸುನಿಲ್, ಸನ್ನಿ, ಮೈಕಲ್ ಎನ್ನುವ ವ್ಯಕ್ತಿಗಳು ತಮ್ಮ ಬೈಕ್ ಗಳನ್ನು ತೆಗೆಯುತ್ತಿದ್ದರು. ಈ ವೇಳೆ ಬೈಕ್ ಟಚ್ ಮಾಡಿದ್ದ ಉತ್ತಮ ಜೊತೆ ವಿನಾಕಾರಣಕ್ಕೆ ಬೈಕ್ ಗೆ ಯಾಕೆ ಟಚ್ ಮಾಡಿದೆ ಅಂತ ಜಗಳಕ್ಕೆ ನಿಂತಿದ್ದರು. ನಂತರ ಉತ್ತಮ ಸಹ ಅವರ ವಿರುದ್ಧ ಬಾಯಿ ಮಾಡಲು ನಿಂತಾಗ ಹಂತಕರು ತಮ್ಮಲ್ಲಿದ್ದ ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದರು.
ಕೇವಲ ಬೈಕ್ ಟಚ್ ಆಗಿದ್ದಕ್ಕೆ ಆರಂಭವಾಗಿದ್ದ ಈ ಸಣ್ಣ ಜಗಳ ಹತ್ಯೆಯ ಮಟ್ಟಿಗೆ ಮುಂದುವರೆದಿತ್ತು. ಮೊದಲೇ ತಮ್ಮ ಬಳಿ ಎಲ್ಲ ಮಾರಕಸ್ತ್ರಗಳನ್ನು ಹೊಂದಿದ್ದ ಹಂತಕರ ಪಡೆ ಉತ್ತಮ ಜೊತೆಗೆ ಜಗಳ ಆರಂಭ ಮಾಡುತ್ತಿದ್ದಂತೆ ಬಳಿಯಿದ್ದ ಚಾಕು ಹಾಕುವ ಮೂಲಕ ಹತ್ಯೆ ಮಾಡಿ ತಮ್ಮ ಬೈಕ್ ಗಳನ್ನು ಸಹ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಸದ್ಯ ಇದೀಗ ಆ ಎಲ್ಲ ಹಂತಕರ ವಿರುದ್ಧ ಸಾಕ್ಷಿಗಳನ್ನು ಕಲೆಹಾಕಿರುವ ಪೊಲೀಸರು ಹತ್ಯೆ ಪ್ರಕರಣಕ್ಕೆ ತಿಲಾಂಜಲಿ ಹಾಡಿದ್ದಾರೆ. ಈ ಮೂಲಕ 5ನೇ ಅಪರ ಮತ್ತು ಜಿಲ್ಲಾ ನ್ಯಾಯಾಲಯ ಸಹ 2 ವರ್ಷದ ಕೇಸ್ ಗೆ ಎಲ್ಲ ಹಂತಕರಿಗೆ 10 ವರ್ಷಗಳ ಕಠಿಣ ಶಿಕ್ಷೆಯ ಜೊತೆಗೆ ದಂಡವನ್ನು ಕಟ್ಟುವಂತೆ ಆದೇಶ ಹೊರಡಿಸಿದ್ದಾರೆ.
ಒಟ್ಟಾರೆ ಜಗಳಗಳು ಸಾಮಾನ್ಯವಾಗಿ ಆಗುತ್ತಲೇ ಇರುತ್ತವೆ. ಅದು ಯಾವತ್ತಿಗೂ ತಾರಕಕ್ಕೆ ಹೋಗಬಾರದು. ಬೈಕ್ ಟಚ್ ಆಯ್ತು, ಆತ ಕೆಟ್ಟ ಶಬ್ದಗಳಿಂದ ಬೈದ ಎನ್ನುವ ಕಾರಣಕ್ಕೆ ಈ ಪ್ರಕರಣದಲ್ಲಿ ಕೊಲೆಯಾಗಿದ್ದು, ಇಂತಹ ಸಣ್ಣ ಸಣ್ಣ ಜಗಳ ಮಾತಿನಲ್ಲೇ ಬಗೆಹರಿದಿದ್ದರೇ ಒಂದು ಅಮಾಯಕ ಪ್ರಾಣದ ಜೊತೆ 10 ವರ್ಷಗಳ ಕಠಿಣ ಶಿಕ್ಷೆಯೂ ಸಹ ತಪ್ಪುತ್ತಿತ್ತು.
ಮಲ್ಲೇಶ ಸೂರಣಗಿ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
Kshetra Samachara
04/08/2021 10:12 am