ಹುಬ್ಬಳ್ಳಿ: ಕೊಲೆ ಪ್ರಕರಣವೊಂದರ ವಿಚಾರಣಾಧೀನ ಖೈದಿಯೋರ್ವ ನಗರದ ಕಾರಾಗೃಹದಿಂದ ಪರಾರಿಯಾಗಿದ್ದಾನೆ.
ಹುಬ್ಬಳ್ಳಿಯ ಆನಂದನಗರದ ವಿಜಯಯಾನಂದ ರೇಣುಕಾಪ್ರಸಾದ್ ನರೇಗಲ್ ಎಂಬಾತನೇ ಪರಾರಿಯಾಗಿರುವ ಖೈದಿ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಯಾನಂದ ಬಂಧಿತನಾಗಿದ್ದ. ಆದರೆ ಇಂದು ವಿಜಯಯಾನಂದ ಪರಾರಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ.
Kshetra Samachara
01/08/2021 05:51 pm