ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಪಘಾತ ಪ್ರಕರಣ ಸಿಬಿಐ ಅಥವಾ ಸಿಓಡಿ ತನಿಖೆಗೆ ನೀಡಿ

ಧಾರವಾಡ: ಅಪಘಾತಕ್ಕೀಡಾಗಿ ದುರ್ಮರಣವಾದ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ಉದ್ಯೋಗಿಗಳ ಸಾವಿನ ಪ್ರಕರಣವನ್ನು ಸಿಬಿಐ ಅಥವಾ ಸಿಓಡಿ ತನಿಖೆಗೆ ವಹಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸುಧೀರ ಮುಧೋಳ ಆಗ್ರಹಿಸಿದರು.

ಅಂಕೋಲಾ ತಾಲೂಕಿನ ಮಾಸ್ತಿಕಟ್ಟೆ ಬಳಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಕೃಷಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಸಿಂಗನಾಥ ಹಾಗೂ ರೇಖಾ ಕೊಕಟನೂರ ಸಾವಿಗೀಡಾಗಿದ್ದಾರೆ. ಇವರನ್ನು ಅದೇ ಕೃಷಿ ವಿವಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಮನಸೂರ ಅಹ್ಮದ ಮುಲ್ಲಾ ತಮ್ಮ ಕಾರಿನಲ್ಲಿ ಹೆದರಿಸಿ, ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಕರೆದುಕೊಂಡು ಹೋಗಿರುವ ಸಂಶಯವಿದೆ. ಅಪಘಾತದಲ್ಲಿ ಮೃತಪಟ್ಟ ಈ ಹೆಣ್ಣು ಮಕ್ಕಳು ತಮ್ಮ ತಂದೆ, ತಾಯಂದಿರಿಗೆ ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಕ್ಕೆ ಕೆಲಸದ ಮೇಲೆ ಹೋಗುತ್ತೇವೆ ಎಂದು ಹೇಳಿ ಹೋಗಿದ್ದರು. ಆದರೆ, ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಮಾಸ್ತಿಕಟ್ಟೆ ಬಳಿ ನಡೆದ ಅಪಘಾತದಲ್ಲಿ ಇವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆಗೆ ಹೋಗುವವರು ಅಂಕೋಲಾದ ಕಡೆಗೆ ಹೋಗಿದ್ದು ಏಕೆ? ಎಂಬ ಸಂಶಯ ಹಾಗೂ ಇವರನ್ನು ಕೊಲೆ ಮಾಡುವ ಅಥವಾ ಅತ್ಯಾಚಾರವೆಸಗುವ ಉದ್ದೇಶದಿಂದಲೇ ಕರೆದುಕೊಂಡು ಹೋಗಿರಬಹುದು ಎಂಬ ಸಂಶಯ ಮೂಡಿದೆ ಎಂದರು.

ಅಪಘಾತವಾದ ದಿನ ಕೃಷಿ ವಿವಿ ಕುಲಪತಿ ಪ್ರೊ.ಮಹಾದೇವ ಚಟ್ಟಿ ದೆಹಲಿಯಿಂದ ಗೋವಾಕ್ಕೆ ಬಂದಿರುವ ಶಂಕೆ ಇದೆ. ಇದು ಸಿಬಿಐ ಅಥವಾ ಸಿಓಡಿ ತನಿಖೆಯಿಂದ ಬಹಿರಂಗವಾಗಬೇಕಾಗಿದೆ. ಎಂ.ಎ.ಮುಲ್ಲಾ ಕುಲಪತಿಗಳ ಆಪ್ತ ಕಾರ್ಯದರ್ಶಿ, ಆದರೆ ಈ ಮನುಷ್ಯ ಕರ್ತವ್ಯದ ನಿಮಿತ್ತವೇ ಹೋಗುವುದಿದ್ದರೆ ಕೃಷಿ ವಿವಿಯ ವಾಹನವನ್ನು ಏಕೆ ಬಳಸಿಲ್ಲ? ತನ್ನ ಸ್ವಂತ ಕಾರಿನಲ್ಲಿ ಇಲಾಖೆಯ ಕೆಲಸಕ್ಕೆಂದು ತೆರಳಿದ್ದು ಏಕೆ ಎನ್ನುವ ಸಂಶಯ ಮೂಡುತ್ತದೆ. ಎಂ.ಎ. ಮುಲ್ಲಾ ತಮ್ಮ ಸ್ವಂತ ಕಾರು ಕೆಎ 28 ಎನ್ 5425 ತೆಗೆದುಕೊಂಡು ಮುಂದೆ ಬರುವ ಕೆಎಸ್ಆರ್ ಟಿಸಿ ಬಸ್ಸಿಗೆ ಅಪಘಾತ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತರವೇ ಇದ್ದು, ಇದರ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಾವು ಕೃಷಿ ವಿವಿವರೆಗೆ ಪಾದಯಾತ್ರೆ ನಡೆಸಿ ಘಟಿಕೋತ್ಸವಕ್ಕೆ ಬರುತ್ತಿರುವ ರಾಜ್ಯಪಾಲರು ಹಾಗೂ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

Edited By : Manjunath H D
Kshetra Samachara

Kshetra Samachara

26/02/2021 01:44 pm

Cinque Terre

45.41 K

Cinque Terre

0

ಸಂಬಂಧಿತ ಸುದ್ದಿ