ಕುಂದಗೋಳ : ಜಾತ್ರೆಗೆ ಚಕ್ಕಡಿ ಕಟ್ಟಿಕೊಂಡು ಹೋಗುತ್ತೆನೆ ಎಂದು ತಯಾರಾದ ಯುವಕನಿಗೆ ಆತನ ಪಾಲಕರು ಚಕ್ಕಡಿ ಬೇಡಾ ಮನೆಯಿಂದ ಹೊರಟಿರುವ ಟ್ರ್ಯಾಕ್ಟರ್'ನಲ್ಲಿ ನೀನು ಜಾತ್ರೆಗೆ ಹೋಗು ಎಂದು ಬುದ್ಧಿ ಹೇಳಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣಾದ ಘಟನೆ ಸೋಮವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕುಂದಗೋಳ ತಾಲೂಕಿನ ಬಿಳೇಬಾಳ ಗ್ರಾಮದ ಶ್ರೀಕಾಂತಗೌಡ ವೀರನಗೌಡ ಪಾಟೀಲ (ವಯಾ 22)ಎಂದು ತಿಳಿದು ಬಂದಿದ್ದು ಜಾತ್ರೆಗೆ ಚಕ್ಕಡಿ ಕಟ್ಟಿಕೊಂಡು ಹೋಗುವುದು ಬೇಡಾ ಎಂದಿದ್ದಕ್ಕೆ ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೋಣೆಯಲ್ಲಿನ ಕಬ್ಬಿನ ಸಳಿಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ತಂದೆ ಪೊಲೀಸ್ ವರದಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
24/02/2021 07:25 pm