ಹುಬ್ಬಳ್ಳಿ: ಬ್ಯಾಂಕ್ ಲೋನ್ ಮತ್ತು ಶಿಕ್ಷಣ ಲೋನ ಕೊಡಿಸುತ್ತೆನೆಂದು ಹೇಳಿ, ಮಹಿಳೆಯೊಬ್ಬಳು ಲಕ್ಷಾಂತರ ರೂಪಾಯಿ ಹಣವನ್ನು ಪಡೆದು, ಸುಮಾರು ಮೂವತ್ತಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿರುವ, ಆರೋಪದಡಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೀಗೆ ಹಣ ಕಳೆದುಕೊಂಡ ಕಣ್ಣೀರು ಹಾಕುತ್ತಿರುವ ಮಹಿಳೆಯರು, ನಮ್ಮ ಹಣ ಕೊಡದಿದ್ರೆ ಬಿಡುವುದಿಲ್ಲ ಎನ್ನುತ್ತಿರು ಯುವಕರು, ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ಶ್ರೀರಾಮ ನಗರದಲ್ಲಿ. ಕಾಂಗ್ರೆಸ್ ಮುಖಂಡೆ ಹಾಗೂ ದೊಡ್ಡ ದೊಡ್ಡ ರಾಜಕೀಯ ಮುಖಂಡರ ಹೆಸರು ಹೇಳಿಕೊಂಡ ಆಕೆ, ವಿವಿಧ ರೀತಿಯ ಲೋನ ಕೊಡಿಸುತ್ತೆನೆಂದು ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾಳೆ ಎಂದು ಗಂಭೀರವಾಗಿ ನೊಂದ ಜನರು ಆರೋಪಿಸಿದ್ದಾರೆ. ಇನ್ನೂ ಕಳೆದ ಎರಡು ವರ್ಷದಿಂದ ಹಣ ಕೊಟ್ಟವರು ಕೇಳಲು ಹೋದರೆ ಹಲವಾರು ಕಾರಣಗಳನ್ನು ಹೇಳುತ್ತಿದ್ದಾಳೆ. ಆದ ಕಾರಣ ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಹುಬ್ಬಳ್ಳಿಯಲ್ಲಿ ಅದೆಷ್ಟೋ ಮಹಿಳೆಯರು, ಮನೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಾಲ ಸಿಗುತ್ತದೆ ಹಾಗೂ ವಿಧ್ಯಾರ್ಥಿಗಳು ಶಿಕ್ಷಣಕ್ಕೆ ಲೋನ ಆಸೆಗಾಗಿ ಕೂಡಿಟ್ಟ ಹಣವನ್ನೆಲ್ಲ ಕೊಟ್ಟಿದ್ದಾರೆ. ಇತ್ತ ಲೋನ ಇಲ್ಲದೇ, ಕೊಟ್ಟ ಹಣವೂ ಇಲ್ಲದೆ, ಮಹಿಳೆಯರು ಹಾಗೂ ಸ್ಟೂಡೆಂಟ್ಸ್ ಕಂಗಾಲಾಗಿದ್ದಾರೆ. ಕಾಂಗ್ರೆಸ್ ಮುಖಂಡೆ ಅಂತ ಹೇಳಿರುವ ಆಕೆ, ಮನೆಗೆ ಹಣಕ್ಕಾಗಿ ಹಲವಾರು ಬಾರಿ ಅವರ ಮನೆಗೆ ಹೋಗಿ ಹಣ ಕೇಳಿದ್ದಾರೆ. ಅದಕ್ಕೆ ಇಂದು ನಾಳೆ ಎನ್ನುತ್ತ ಬಂದಿರೋ ಆಕೆ, ಯಾಮಾರಿಸುತ್ತಲೇ ಬಂದಿದ್ದಾಳಂತೆ. ಇದರಿಂದ ಮೋಸ ಹೋದ ಮಹಿಳೆಯರು ಮತ್ತು ವಿಧ್ಯಾರ್ಥಿಗಳು ಪ್ರಕರಣ ದಾಖಲಿಸುತ್ತವೆ ಅಷ್ಟೇ ಅಲ್ಲದೆ, ಎಮ್‌ಎಲ್ ಎ ಹೆಸರನ್ನೆ ದುರ್ಬಳಕೆ ಮಾಡಿಕೊಂಡ ಈಕೆಗೆ ತಕ್ಕ ಶಿಕ್ಷೆ ಆಗಬೇಕೆಂದು ಮಾಧ್ಯಮದ ಮೂಲಕ ಒತ್ತಾಯಿಸಿ, ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ಮೆಟ್ಟಿಲು ಏರಿದ್ದಾರೆ...
ಒಟ್ಟಿನಲ್ಲಿ ಜಿಲ್ಲೆಯ ರಾಜಕೀಯ ಧುರೀಣರ ಹೆಸರು ಹೇಳಿ, ನಗರದ ಮಹಿಳೆಯರಿಗೆ ಮೋಸ ಮಾಡುತ್ತಿರುವ ಆರೋಪ ದಿನದಿಂದ ದಿನಕ್ಕೆ ಹೆಚ್ಚತ್ತಲೇ ಇದೇ, ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಮೋಸ ಮಾಡುವ ಜಾಲವೇ ಹುಬ್ಬಳ್ಳಿಯಲ್ಲಿ ಹರಡಿದ್ಯಾ ಅನ್ನೋ ಅನುಮಾನ ಹುಟ್ಟಿದ್ದು, ಹಿಂದೆ ಸಹ ಹುಬ್ಬಳ್ಳಿಯಲ್ಲಿ ಇಂತಹ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ದಾಖಲಾಗಿದ್ದು ಇದೆಲ್ಲದಕ್ಕೂ ಪೊಲೀಸ್ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಿದೆ...!
Kshetra Samachara
24/02/2021 01:46 pm