ಹುಬ್ಬಳ್ಳಿ: ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಕೊಲ್ಲಾಪುರಕ್ಕೆ ವಸ್ತುಗಳನ್ನು ಖರೀದಿಸಲು ಹೋದ ಸಂದರ್ಭದಲ್ಲಿ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ.
ನಗರದ ವೀರಾಪೂರ ಓಣಿಯ ನಿವಾಸಿ ಅಯ್ಯಪ್ಪ ಮಾಲಾ ಧಾರಿಗಳಿಗೆ ಗುರುವಾಗಿದ್ದ ರವಿ ಹೋತಪೇಟೆ ಗೊಂಬೆಗಳಿಗೆ ಆಭರಣಗಳನ್ನು ಪೂರೈಕೆ ಮಾಡುತ್ತಿದ್ದರು. ಅದೇ ಕಾರಣಕ್ಕೆ ಆಭರಣಗಳನ್ನು ತರುವುದಾಗಿ ಕೊಲ್ಲಾಪುರಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ತಂಗಿದ್ದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಹುಬ್ಬಳ್ಳಿಯ ಬಹುತೇಕ ಭಾಗದ ಅಯ್ಯಪ್ಪ ಮಾಲಾ ಧಾರಿಗಳ ಪೂಜೆಗಳಲ್ಲಿ ಭಾಗವಹಿಸುತ್ತಿದ್ದ ರವಿ ಹೋತಪೇಟೆ, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಕೊಲ್ಲಾಪುರ ಠಾಣೆಯ ಪೊಲೀಸರು ಮಾಹಿತಿಯನ್ನು ಕುಟುಂಬದವರಿಗೆ ರವಾನೆ ಮಾಡಿದ್ದು, ರವಿ ಹೋತಪೇಟೆಯ ಸಂಬಂಧಿಗಳು ಕೊಲ್ಲಾಪುರಕ್ಕೆ ತೆರಳಿದ್ದಾರೆ. ಪೊಲೀಸ್ ತನಿಖೆಯ ನಂತರವೇ ಆತ್ಮಹತ್ಯೆಗೆ ಕಾರಣ ಗೊತ್ತಾಗಲಿದೆ.
Kshetra Samachara
24/02/2021 12:04 pm