ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಸಾಯಿನಗರದ ಬಳಿ ನಡೆದಿದೆ.
ಸುಮಾರು ಆರವತ್ತರ ಆಸುಪಾಸಿನ ವ್ಯಕ್ತಿಯು ರೈಲ್ವೆ ಹಳಿಗೆ ಬಿದ್ದು,ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ವ್ಯಕ್ತಿ ಗುರುತು ಪತ್ತೆಯಾಗಿಲ್ಲ.ಅಲ್ಲದೇ ಆತ್ಮಹತ್ಯೆ ಕಾರಣ ಕೂಡ ತಿಳಿದುಬಂದಿಲ್ಲ. ಘಟನೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
23/02/2021 07:03 pm