ಕುಂದಗೋಳ : ಕುಂದಗೋಳ ಪಟ್ಟಣದ ಪೋಟೋ ಸ್ಟುಡಿಯೋ ಒಂದರಲ್ಲಿ ಎರೆಡು ನೂರು ರೂಪಾಯಿ ಖೋಟಾ ನೋಟನ್ನು ನೀಡಿ ಅಂಗಡಿಯಾತನಿಗೆ ಗ್ರಾಹಕರೊಬ್ಬರು ಮೋಸ ಮಾಡಿದ ಘಟನೆ ಇಂದು ಮಧ್ಯಾಹ್ನದ ಅವಧಿಯಲ್ಲಿ ನಡೆದಿದೆ.
ಪೋಟೋ ತೆಗೆಸಲು ಬಂದ ಗ್ರಾಹಕರು ಎರೆಡು ರೂಪಾಯಿ ಖೋಟಾ ನೋಟು ನೀಡಿ ಪೋಟೋ ತೆಗೆಸಿಕೊಂಡು ಚಿಲ್ಲರೆ ಪಡೆದು ಮರಳಿದ್ದಾರೆ. ಸಂಜೆ ಸಮಯದಲ್ಲಿ ಅಂಗಡಿಯಾತನಿಗೆ ಗ್ರಾಹಕರು ನೀಡಿದ್ದು ಖೋಟಾ ನೋಟು ಎಂದು ಗೊತ್ತಾಗಿದೆ.
ಈ ಖೋಟಾ ನೋಟನ್ನು ಅಂಗಡಿ ಬಂದ ಗ್ರಾಹಕರು ತಮಗೆ ಯಾರೋ ನೀಡಿದ್ದನ್ನು ಅರಿಯದೇ ಕೊಟ್ಟರೊ ? ಅಥವಾ ಉದ್ದೇಶ ಪೂರ್ವಕವಾಗಿ ಹಣ ನೀಡಿದ್ದಾರೊ ? ಎಂಬುದು ತಿಳಿದು ಬಂದಿಲ್ಲಾ.
ಈ ಘಟನೆಯಿಂದ ಖೋಟಾ ನೋಟು ಪಡೆದ ಅಂಗಡಿಯವರು ಶಾಕ್ ಆಗಿದ್ದು ಇತರೆ ವ್ಯಾಪಾರಿ ಹಾಗೂ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
Kshetra Samachara
18/02/2021 11:05 pm