ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಹುಬ್ಬಳ್ಳಿಯ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ಬೇಧಿಸಿದ್ದಾರೆ. ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಕಾರ್ಯಾಚರಣೆ ಮಾಡಿ ಬರೊಬ್ಬರಿ 8 ಕೆಜಿ 495 ಗ್ರಾಂ ಗಾಂಜಾವನ್ನು ವಶಕ್ಕೆ ತಗೆದುಕೊಂಡು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಒಟ್ಟು 85.000ಬೆಲೆಯ 8ಕಿಲೋ 495 ಗ್ರಾಂ ತೂಕದ ಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.ಸಲೀಮಿಯಾ ಮೌಜನ್,ರಮೇಶ್ ಕೊರವಾ, ಸಿದ್ದಾರ್ಥ ಹಬೀಬ,ಲಿಂಗೇಶಗೌಡ ಪಾಟೀಲ,ಮಹೇಶ ಪಾಟೀಲ, ಬಂಧಿತ ಆರೋಪಿಗಳಾಗಿದ್ದಾರೆ.
ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಆರೋಪಿಗಳನ್ನು ಮಾರಾಟ ಮಾಡುವಾಗ ರೇಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯನ್ನು ಇನ್ಸ್ಪೆಕ್ಟರ್ ಎಮ್.ಎಸ್. ಹೂಗಾರ, ನೇತೃತ್ವದಲ್ಲಿ ಪಿಎಸ್ಐ ಸದಾಶಿವ ಕಾನಟ್ಟಿ ಮತ್ತು ಟೀಮ್ ನವರು ದಾಳಿ ಮಾಡಿದ್ದಾರೆ.
Kshetra Samachara
15/02/2021 05:20 pm