ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಾಲಬಾಧೆ: ನೇಣಿಗೆ ಕೊರಳೊಡ್ಡಿದ ಯುವ ರೈತ

ಧಾರವಾಡ: ಸಾಲಬಾಧೆಯಿಂದ ಯುವ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ.

ಸುಭಾಷ ಸಣ್ಣಮನಿ (34) ಎಂಬಾತನೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವನು.

ಶಿರೂರು ಗ್ರಾಮದ ವಿಜಯಾ ಬ್ಯಾಂಕ್, ವಿವಿಧೆಡೆಯ ಫೈನಾನ್ಸ್ ಗಳಲ್ಲಿ ಸುಭಾಷ ಸುಮಾರು 17 ಲಕ್ಷಕ್ಕೂ ಅಧಿಕ ಕೃಷಿ ಸಾಲ ಪಡೆದುಕೊಂಡಿದ್ದ. ಈ ಸಾಲ ತೀರಿಸಲಾಗದೇ ನಿನ್ನೆ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

12/02/2021 01:45 pm

Cinque Terre

48.01 K

Cinque Terre

3

ಸಂಬಂಧಿತ ಸುದ್ದಿ