ಕಲಘಟಗಿ:ಪಟ್ಟಣದಲ್ಲಿ ಒಂಬತ್ತನೇಯ ತರಗತಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿಯಲಾಗಿದ್ದು,ವಿದ್ಯಾರ್ಥಿ ತೀವ್ರ ಗಾಯಗೊಂಡಿದ್ದಾನೆ.
ಪಟ್ಟಣದ ಮಾಚಾಪುರ ತಾಂಡೆಯ ಮಂಜುನಾಥ ವೆಂಕಪ್ಪ ಲಮಾಣಿ ಎಂಬ ವಿದ್ಯಾರ್ಥಿಗೆ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದೆ.ಗಾಯಗೊಂಡ ವಿದ್ಯಾರ್ಥಿಯನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ.ಸಧ್ಯ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ದೇವೆಂದ್ರ ಲಮಾಣಿ ಸ್ಥಳೀಯ ಠಾಣೆಗೆ ದೂರು ನೀಡಿದ್ದಾನೆ.ಆಕಾಶ ಕಟ್ಟಿಮನಿ,ಯಲ್ಲಪ್ಪ ಕಟ್ಟಿಮನಿ,ಸುರೇಶ ಕಟ್ಟಿಮನಿ,ಬಸವರಾಜ ಕಟ್ಟಿಮನಿ,ಕಾರ್ತಿಕ್
ಕಟ್ಟಿಮನಿ,ದರ್ಶನ ಹರಿಜನ ಎಂಬುವರ ಮೇಲೆ ಕಲಂ 341,307,504,505 ಐಪಿಸಿ ಅಡಿಯಲ್ಲಿ ಪೊಲೀಸ್ ರು ಪ್ರಕರಣ ದಾಖಲಿಸಿ
ತೀವ್ರ ವಿಚಾರಣೆ ನಡೆಸಿದ್ದಾರೆ.ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ ಎರ್ಪಡಿಸಲಾಗಿದೆ.
ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ ಘಟನೆಯ ತನಿಖೆ ನಡೆಸಿದ್ದಾರೆ.
Kshetra Samachara
05/02/2021 11:27 pm