ಕುಂದಗೋಳ : ತಾಲೂಕಿನ ಕಂದಾಯ ನಿರೀಕ್ಷಕರ ಸಹಾಯಕ ಶಿವಾನಂದ ಶಿರಹಟ್ಟಿ ಮನಸ್ವಿನಿ ಯೋಜನೆಯ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆಗೆ ಅರ್ಜಿ ಮಾಡಿಸಿಕೊಡಲು 500 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು ಲಂಚ ಪಡೆಯುವ ವೇಳೆಯೇ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಯಲ್ಲಪ್ಪ ಶಿವಳ್ಳಿ ಎಂಬುವವರ ಚಿಕ್ಕಮ್ಮ ಮಾದೇವಿ ಹಂಚಿನಾಳ ನೀಡಿದ ದೂರು ಆಧರಿಸಿದ ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ಮಾರ್ಗದರ್ಶನದ ಎಸಿಬಿ ತಂಡ ಲಂಚ ಪಡೆಯುವ ವೇಳೆ ಶಿವಾನಂದ ಶಿರಹಟ್ಟಿ ಮೇಲೆ ದಾಳಿ ನಡೆಸಿ ಬಂಧಿಸಿದೆ.
ಈ ಕುರಿತಂತೆ ವಿಚಾರಣೆ ಕೈಗೊಂಡಿದ್ದು ಎಸಿಬಿ ತಂಡ ತನಿಖೆ ಮುಂದುವರೆಸಿದೆ.
Kshetra Samachara
05/02/2021 09:00 am