ಹುಬ್ಬಳ್ಳಿ:ಹುಡುಗಿ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸೈಬರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಶ್ಮಾ ಸುಸು ಎಂಬ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬುವವರಿಗೆ ಪ್ರೀತಿ ಮಾಡುವುದಾಗಿ ಹೇಳಿ ಮೂರು ವರ್ಷಗಳಿಂದ ಚಾಟಿಂಗ್ ಮಾಡಿ ಬಳಿಕ ರುದ್ರಗೌಡ ಮಲ್ಲನಗೌಡ ಪಾಟೀಲ ಅವರ ಕಡೆಯಿಂದ ಹಾಗೂ ಪರಿಚಯಸ್ಥರ ಕಡೆಯಿಂದ ಸುಮಾರು 14-15 ಲಕ್ಷ ರೂಪಾಯಿ ಹಣವನ್ನು ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದ ಹಾಸನ ಜಿಲ್ಲೆಯ ಪ್ರತಾಪ ಡಿ.ಎಂ ಎಂಬಾತನನ್ನ ಬಂಧನ ಮಾಡಲಾಗಿದೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ, ಧಾರವಾಡ ಸೈಬರ್ ಕ್ರೈಂ, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಿಜಯ ಬಿರಾದಾರ, ಸಿಬ್ಬಂದಿಗಳಾದ ಎಎಸ್ಐಗಳಾದ ವ್ಹಿ.ಎಸ್.ಬೆಳಗಾಂವಕರ, ಪಿ.ಜಿ.ಕಾಳಿ, ಆರ್.ಎಸ್.ಜಾಧವ, ಹವಾಲ್ದಾರಗಳಾದ ಎ.ಎ.ಕಾಕರ, ಬಿ.ಎನ್.ಬಳಗಣ್ಣನವರ, ಎ.ಎಂ.ನವಲೂರ, ಆರ್.ಎನ್.ಕಮದೊಡ, ಪಿ.ಜಿ.ಪಾಟೀಲ, ಸಿಬ್ಬಂದಿಗಳಾದ ಆರ್.ಎ.ಕಟ್ಟಿ, ಯು.ಎಂ.ಅಗಡಿ, ಬಿ.ಎಸ್.ದೇಮಕ್ಕನವರ ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
04/02/2021 06:34 pm