ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಮಗನೇ ತಂದೆಗೆ ಚಾಕುವಿನಿಂದ ಇರಿದ ಘಟನೆಯೊಂದು ಹುಬ್ಬಳ್ಳಿಯ ಕೇಶ್ವಾಪುರದ ವೆಂಕಟೇಶ ಕಾಲೋನಿಯ ಕಾಳೆ ಲೇಔಟ್ ನಲ್ಲಿ ನಡೆದಿದೆ.
ಶ್ರೀಧರ ಎಂಬಾತನೇ ತಂದೆ ಮುದಕಪ್ಪ ದೇವನೂರಗೆ ಚಾಕು ಹಾಕಿದಾತ. ಆಸ್ತಿಯಲ್ಲಿ ಪಾಲು ಕೊಡುವಂತೆ ಶ್ರೀಧರ ತಂದೆಯ ಜೊತೆ ಜಗಳವಾಡುತ್ತಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ತಂದೆಗೆ ಕುಡಿದ ಅಮಲಿನಲ್ಲಿ ಚಾಕು ಇರಿದಿದ್ದಾನೆ
ಚಾಕು ಇರಿತದಿಂದ ಗಾಯಗೊಂಡಿರುವ ತಂದೆ ಮುದಕಪ್ಪನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಗ ಶ್ರೀಧರ ಪರಾರಿಯಾಗಿದ್ದು, ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/02/2021 11:55 am