ಧಾರವಾಡ: ಧಾರವಾಡ ಜಿಲ್ಲಾಧಿಕಾರಿಗಳ ಅಂಗ ರಕ್ಷಕ (ಗನ್ ಮ್ಯಾನ್) ಪ್ರಕಾಶ ಮಾಳಗಿ ಅವರು ಕೆಲವೊಂದು ಗ್ರಾಮೀಣ ಭಾಗಗಳಲ್ಲಿ ತಾನು ಗನ್ ಮ್ಯಾನ್ ಎಂಬ ಗರ್ವದಿಂದ ದಬ್ಬಾಳಿಕೆ ನಡೆಸುತ್ತಿದ್ದು, ಅಲ್ಲದೇ ಯಾದವಾಡದ ಕೆಲ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಯಾದವಾಡ ಗ್ರಾಮಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರಕಾಶ ಮಾಳಗಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದವನಾಗಿದ್ದು, ಯಾದವಾಡ ಸೇರಿದಂತೆ ಸುತ್ತಲಿನ ಊರಿನ ಜನರಿಗೆ ಧಮ್ಕಿ ಹಾಕುವುದು, ನಾನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ ನನ್ನನ್ನು ಯಾರೂ ಏನೂ ಮಾಡೋದಿಲ್ಲ ಎಂದು ಕೆಲವರ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ.
ಈತ ಕೊಟ್ಟಿರುವ ಕೆಲಸವನ್ನು ದುರುಪಯೋಗ ಮಾಡಿಕೊಂಡು ಜನರಿಗೆ ಹೆದರಿಕೆ ಹಾಕುತ್ತಿದ್ದಾನೆ. ಇಂತವನನ್ನು ಕೂಡಲೇ ಕೆಲಸದಿಂದ ತೆಗೆಯಬೇಕು, ಅಲ್ಲದೆ ಧಮ್ಕಿ, ಹಲ್ಲೆ ಮಾಡಿದ್ದಕ್ಕೆ ತಕ್ಕ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ.
Kshetra Samachara
01/02/2021 06:24 pm