ಹುಬ್ಬಳ್ಳಿ: ಹೃದಯಾಘಾತದಿಂದ ಬಳಲುತ್ತಿದ್ದ ಮಹಿಳೆ ಸಾವನಪ್ಪಿದ್ದರು ಹಣ ಪಡೆದ ಮೇಲೆಯೇ ಆಸ್ಪತ್ರೆಯವರು ಸಾವಿನ ಸುದ್ದಿ ತಿಳಿಸಿದ್ದಾರೆ ಎಂದು, ರೋಗಿಯ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿರುವ ಘಟನೆ ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ತಡರಾತ್ರಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಸುವರ್ಣ ಕಕ್ಕಯ್ಯಗೋಳ ಎಂಬ ಮಹಿಳೆ, ಕೆಲವು ದಿನಗಳ ಹಿಂದೆ ದೇಶಪಾಂಡೆ ನಗರದಲ್ಲಿರುವ ವಿವೇಕಾನಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ಖಾಯಿಲೆಗಾಗಿ ಸರಕಾರದ ಸ್ಕೀಂ ನಡಿ ಆಪರೇಷನ್ ಮಾಡುವುದಾಗಿ ಹೇಳಿದ್ದರು. ಆದರೆ, ನಂತರ 30 ಸಾವಿರ ಹಣವನ್ನ ಕೊಡುವಂತೆ ಕೇಳಿದ್ದರಿಂದ ಹಣ ಪಾವತಿ ಮಾಡಿದ್ದವೆ. ಆದರೆ, ಮೂವತ್ತು ಸಾವಿರ ರೂಪಾಯಿ ಕೊಡುವ ಮುನ್ನವೇ ನಮ್ಮ ಅಕ್ಕ ಸಾವನ್ನಪ್ಪಿದ್ದಾಳೆ ಎಂದು ಮೃತ ಮಹಿಳೆಯ ಸಹೋದರಿ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಸುವರ್ಣ ಸಾವಿನಿಂದ ಮನೆಯವರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Kshetra Samachara
30/01/2021 03:45 pm