ಧಾರವಾಡ: ನೇಣು ಹಾಕಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಸಮೀಪದ ಹೆಬ್ಬಳ್ಳಿ ಫಾರ್ಮ್ ನಲ್ಲಿ ನಡೆದಿದೆ.
ಪುಂಡಲೀಕ ಕಲ್ಲಪ್ಪ ನವಲಗುಂದ (39) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವನು.
ಆತನ ಹೆಂಡತಿ ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದರಿಂದ ಮನನೊಂದು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
29/01/2021 11:11 pm