ಕಲಘಟಗಿ: ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಜ.21ರ ಸಂಭವಿಸಿದ ಭಾರೀ ದುರಂತದಲ್ಲಿ 15 ಮಂದಿ ಬಲಿಯಾಗಿದ್ದರು. ಈ ಘಟನೆಯಿಂದ ಎಚ್ಚೆತ್ತ ರಾಜ್ಯ ದಳ ರಾಜ್ಯಾದ್ಯಂತ ದಾಳಿ ನಡೆಸಿ ಅನಧೀಕೃತ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದ ಶಿವಚಂದ್ರ ಸ್ಟೋನ್ ಮತ್ತು ಕ್ರಷರ್ ಇಂಡಸ್ಟ್ರಿ ಕ್ವಾರಿಯ ಮೇಲೆ ಆಂತರಿಕ ಭದ್ರತಾ ವಿಭಾಗ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ 234 ಜಿಲೆಟಿನ್ ಕಡ್ಡಿಗಳು 675 ಎಲೆಕ್ಟ್ರಾನಿಕ್ ಡಿಟೋನೇಟರ್, ಒಂದು ಕಪ್ಪುಬಣ್ಣದ ಮೆಗ್ಗರ್ ಮಷೀನ್ ಜಪ್ತಿ ಮಾಡಿದ್ದಾರೆ.
ಪ್ರೇಮಾ ವೀರನಗೌಡ ಪಾಟೀಲ್ ಅವರ ಒಡೆತನದಲ್ಲಿರುವ ಶಿವಚಂದ್ರ ಸ್ಟೋನ್ ಮತ್ತು ಕ್ರಷರ್ ಇಂಡಸ್ಟ್ರಿ ಮಷೀನ್ ಮುಂದಿನ ಶೆಡ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಪ್ಲಾಸ್ಟಿಕ್ ಚೀಲದಲ್ಲಿ ಒಟ್ಟು 7,715 ರೂ. ಮೌಲ್ಯದ ಅನಧಿಕೃತವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ದಾಸ್ತಾನು ಮಾಡುವ ಉದ್ದೇಶದಿಂದ ವಿಜಯಪುರ ಮೂಲದ ತಿಪ್ಪ ರಾಯ ಎಂಬವವರು ಮಷಿನ್‌ಗಳನ್ನ ತರೆಸಿಕೊಂಡಿದ್ದರು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಆಂತರಿಕ ಭದ್ರತಾ ವಿಭಾಗದ ಪಿ.ಐ.ಜಯಶ್ರೀ ಮಾನೆ ಆರೋಪಿಗಳಾದ ಶಿವಕುಮಾರ ಪಾಟೀಲ್ ಹಾಗೂ ವಿಜಯಪುರದ ತಿಪ್ಪ ರಾಯ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಪ್ರಭು ಸೂರಿನ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
24/01/2021 11:22 am