ಹುಬ್ಬಳ್ಳಿ: ಬೈಕ್ ಸಮೇತ ವ್ಯಕ್ತಿಯನ್ನು ಅಪಹರಣ ಮಾಡಿ, ಊರೂರು ಸುತ್ತಿಸಿ ಮತ್ತೆ ಹುಬ್ಬಳ್ಳಿಗೆ ಕರೆತಂದು ಹಣ ದೋಚಿದ್ದ, ತಂಡವನ್ನು ಪತ್ತೆ ಹಚ್ಚುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರು ಆಯುಕ್ತರು ಸಿಬ್ಬಂದಿಗಳಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.
ಹುಬ್ಬಳ್ಳಿಯ ವಾಸುದೇವ ಮಹಾದೇವಪ್ಪ ಪಾರ್ವತಿಯವರ ಎಂಬುವವರನ್ನು, ಜನೇವರಿ 13ರಂದು ನಗರದಿಂದ ಬೈಕ್ ಸಮೇತ ಅಪಹರಣ ಮಾಡಿ, ಆತನಿಂದ ಮೊಬೈಲ್ ಹಾಗೂ 72,405 ರೂಪಾಯಿ ದೋಚಿಕೊಂಡು, ಕಾರಿನಲ್ಲಿ ಹಾಕಿಕೊಂಡು ಊರೂರು ಅಲೆಸಿದ್ದ ಆರು ಆರೋಪಿಗಳನ್ನ ಬಂಧನ ಮಾಡಲಾಗಿದೆ..
ಕಾರಿನಲ್ಲಿ ಅಲೆದಾಡಿ ಮತ್ತೆ ಹುಬ್ಬಳ್ಳಿಗೆ ಬಂದು, 5ಲಕ್ಷ ತರುವಂತೆ ಹೇಳಿ ಹಣ ಪಡೆದು, ಯಾರಿಗಾದರೂ ಹೇಳಿದರೆ ಚಾಕು ಹಾಕುತ್ತೇವೆ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದರ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಹರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿಯ ಶಿವರಾಜ ನಿಂಗಪ್ಪ ನೇಗುಣಿ, ಶೇಖರ ಗಂಗಾಧರ ಬಾರಕೇರ, ಕಲಘಟಗಿಯ ಶಂಕರ ಸುರೇಶ ಕಟಾವಕರ, ಆನಂದನಗರದ ಪ್ರಶಾಂತ ಅಲಿಯಾಸ್ ಕಾಳ್ಯಾ ಮಹಾದೇವಪ್ಪ ಬೀರಣ್ಣವರ, ಧಾರವಾಡ ಹೆಬ್ಬಳ್ಳಿ ಅಗಸಿಯ ನಾಗಪ್ಪ ಅಲಿಯಾಸ್ ಮಂಜು ಚಿದಂಬರ ಯಲಿಗಾರ ಹಾಗೂ ಧಾರವಾಡ ಸವದತ್ತಿ ರಸ್ತೆಯ ಮಹಾಂತೇಶ ಗುರುನಾಥ ಇದ್ಲಿ ಎಂಬುವವರನ್ನ ಬಂಧನ ಮಾಡಲಾಗಿದೆ. ಆರೋಪಿತರಿಂದ 1ಲಕ್ಷ 50 ಸಾವಿರ ರೂಪಾಯಿ ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಕೆ ಮಾಡಿದ ಚಾಕುಗಳನ್ನ ಜಪ್ತಿ ಮಾಡಲಾಗಿದೆ....
Kshetra Samachara
23/01/2021 03:26 pm