ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಂಪೌಂಡ್ ಕುಸಿದು ಕಾರ್ಮಿಕ ಸಾವು

ಹುಬ್ಬಳ್ಳಿ- ಹೊಸ ಮನೆ ಕಟ್ಟಲು ಪಾಯವನ್ನು ತೆಗೆಯುವಾಗ, ಕಾರ್ಮಿಕನ ಮೇಲೆ ಕಂಪೌಂಡ್ ಒಂದು ಕುಸಿದು ಬಿದ್ದ ಪರಿಣಾಮ ಕಾರ್ಮಿಕ ಸಾವನಪ್ಪಿದ ಘಟನೆ ವಿದ್ಯಾನಗರದ ಲಿಂಗಾರಾಜದಲ್ಲಿ ನಡೆದಿದೆ.

ಮನೆ ಕಟ್ಟುಲು ಪಾಯವನ್ನು ತೆಗೆಯುವ ಸಂದರ್ಭದಲ್ಲಿ, ಪಕ್ಕದ ಮನೆಯ ಕಂಪೌಂಡ್ ಒಂದು ಕುಸಿದು ಕಾರ್ಮಿಕನಾದ ಈರಪ್ಪ ಸಂಕನಗೌಡ್ರ ಮೇಲೆ ಬಿದ್ದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದರು ಕೂಡಾ, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಕಾರ್ಮಿಕ ಮೂಲತಃ ಬಂಡಿವಾಡ ಮಂಟೂರ್ ಗ್ರಾಮದ ವ್ಯಕ್ತಿಯಾಗಿದ್ದು, ಈತ ಲಿಂಗಾರಾಜ ನಗರದಲ್ಲಿ ಕೆಲಸ ಮಾಡಲು ಹೋಗಿದ್ದ ಎಂದು ತಿಳಿದು ಬಂದಿದ್ದು, ಈ ಕುರಿತು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

22/01/2021 08:03 pm

Cinque Terre

59.09 K

Cinque Terre

1

ಸಂಬಂಧಿತ ಸುದ್ದಿ