ಧಾರವಾಡ: ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್ ಕಳ್ಳತನವಾಗುತ್ತಿರುವುದು ಸಹಜ. ಆದರೆ, ಇದೀಗ ಮನೆ ಮುಂದೆ ನಿಲ್ಲಿಸಿದ ಕಾರುಗಳನ್ನು ಸಹ ಕಳ್ಳರು ಬಿಡದೇ ಕದ್ದೊಯ್ಯುತ್ತಿರುವುದು ಬೆಳಕಿಗೆ ಬರುತ್ತಿದೆ.
ಇದಕ್ಕೆ ಮತ್ತೊಂದು ಕಾರು ಕಳ್ಳತನ ಸಾಕ್ಷಿಯಾಗಿದೆ. ಈ ಹಿಂದೆ ಗಾಂಧಿನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನವಾಗಿತ್ತು. ಇದೀಗ ಯಾಲಕ್ಕಿಶೆಟ್ಟರ್ ಕಾಲೊನಿಯಲ್ಲಿ ಮತ್ತೊಂದು ಕಾರು ಕಳ್ಳತನವಾಗಿದ್ದು, ನಗರದಲ್ಲಿ ಕಾರು ಕಳ್ಳತನ ಮಾಡುವ ಖದೀಮರ ಸಂಖ್ಯೆ ಹೆಚ್ಚಾದಂತೆ ಕಂಡು ಬರುತ್ತಿದೆ.
ಮನೋಹರ ನಿಂಬರಗಿ ಎಂಬುವರು ತಮ್ಮ ಮನೆಯ ಮುಂದೆ 3 ಲಕ್ಷ ಬೆಲೆಬಾಳುವ ಅಲ್ಟೊ ಕಾರು ನಿಲ್ಲಿಸಿ ಡೋರ್ ಕೂಡ ಲಾಕ್ ಮಾಡಿಕೊಂಡು ಹೋಗಿದ್ದರು. ಲಾಕ್ ಆಗಿದ್ದರೂ ಕೂಡ ಖದೀಮರ ಕಾರು ಎಗರಿಸಿಕೊಂಡು ಹೋಗಿರುವುದು ಅಚ್ಛರಿ ಮೂಡಿಸಿದೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
22/01/2021 09:05 am