ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸರ ಬಲೆಗೆ ಬಿದ್ದ ಚಾಲಾಕಿ ಕಳ್ಳ ಸಹೋದರರು

ಧಾರವಾಡ: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಬೆಂಗಳೂರು ಸೇರಿದಂತೆ ಹುಬ್ಬಳ್ಳಿ-ಧಾರವಾಡದಲ್ಲೂ ಕಳ್ಳತನ ಮಾಡುತ್ತಿದ್ದ ಚಾಲಾಕಿ ಸಹೋದರರನ್ನು ಹಿಡಿಯುವಲ್ಲಿ ಹುಬ್ಬಳ್ಳಿಯ ಸಿಸಿಬಿ ಹಾಗೂ ಸಿಸಿಆರ್ ಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡದ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ತಂದಿದ್ದ ಚಿನ್ನ ಹಾಗೂ ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲೂ ಈ ಸಹೋದರರು ಕಳ್ಳತನ ಮಾಡಿದ್ದರು ಎಂದು ಗೊತ್ತಾಗಿದೆ. ಬಂಧಿತರಿಂದ ಒಟ್ಟು 10 ಗ್ರಾಂ ಚಿನ್ನ, 3 ಬೈಕ್, ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೊದಲು ಉಣಕಲ್ ನ ಸಿದ್ಧರಾಮೇಶ್ವರ ನಗರದ ನಿವಾಸಿಯಾಗಿದ್ದ ಹಸನಸಾಬ್ ಹಾಗೂ ಆಸೀಫ್ ಸಾಬ್ ಇವರಿಬ್ಬರು ಸಹೋದರರಾಗಿದ್ದು, ಕಳ್ಳತನ ಮಾಡುವುದನ್ನೇ ಇಬ್ಬರು ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಇವರ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ ಸ್ಪೆಕ್ಟರ್ ಅಲ್ತಾಫ್ ಮುಲ್ಲಾ ಹಾಗೂ ಸಿಸಿ ಆರ್ ಬಿ ಇನ್ ಸ್ಪೆಕ್ಟರ್ ಭರತ ರೆಡ್ಡಿ ಸಿಬ್ಬಂದಿಯಾದ ಶಿವರಾಜ ಸೋಳಂಕಿ, ಚಿಕ್ಕಮಠ, ಗುಂಜಾಳ, ಚೆನ್ನಪ್ಪನವರ್, ಇಚ್ಛಂಗಿ, ಗಾಣದಾಳ, ಅನಿಲ ಉದ್ದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Edited By : Vijay Kumar
Kshetra Samachara

Kshetra Samachara

10/01/2021 12:06 pm

Cinque Terre

58.75 K

Cinque Terre

0

ಸಂಬಂಧಿತ ಸುದ್ದಿ