ಹುಬ್ಬಳ್ಳಿ: ನಾಲ್ಕು ದಿನದ ಹಿಂದೆ ಮಗು ಕಿಡ್ನ್ಯಾಪ್ ಆಗಿದೆ ಅಂತ ದೂರು ದಾಖಲಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು,ಇಂದು ಪಕ್ಕದ ಮನೆಯಲ್ಲಿಯೇ ಮಗುವಿನ ಶವ ಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಭಾರತ ನಗರದಲ್ಲಿ ಘಟನೆ ನಡೆದಿದೆ.
5 ವರ್ಷದ ಶ್ರೇಯಾ ಶವವಾಗಿ ಪತ್ತೆಯಾದ ಬಾಲಕಿ. ಪಕ್ಕದ ಮನೆಯ ನೀರಿನ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದು,ನಾಲ್ಕು ದಿನದ ಹಿಂದೆಯಷ್ಟೇ ಮಗು ನಾಪತ್ತೆಯಾಗಿದೆ ಅಂತ ದೂರನ್ನು ಕೂಡ ದಾಖಲಿಸಲಾಗಿತ್ತು.ಆದರೇ ಇಂದು ಶವವಾಗಿ ಪತ್ತೆಯಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ
ಮುಗಿಲು ಮುಟ್ಟಿದೆ.
ಹನುಮಂತಪ್ಪ ಗಾಳಪ್ಪನವರ್ ಪುತ್ರಿ ಶ್ರೇಯಾ. ಬಾಡಿಗೆ ಮನೆಯಲ್ಲಿ ಶವ ಪತ್ತೆಯಾಗಿದ್ದು,ಬೇರೆಯವರಿಗೆ ಬಾಡಿಗೆ ನೀಡಿದ್ದ ಹನುಮಂತಪ್ಪ ಕುಟುಂಬಸ್ಥರು. ಸಧ್ಯ ಬಾಡಿಗೆ ನೀಡಿದ ಮನೆಯಲ್ಲಿ ಮಗು ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದು,ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/01/2021 04:50 pm