ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾಲದ ಬಾಧೆಯಿಂದ ಬಳಲಿದ ರೈತ ನೇಣಿಗೆ ಶರಣು

ಕುಂದಗೋಳ: ಸಾಲದ ಬಾಧೆ ತಾಳಲಾರದೆ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಮುಳ್ಳೊಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ರಾಮಪ್ಪ ಬಸಪ್ಪ ಗುಡೇನಕಟ್ಟಿ (51) ಆತ್ಮಹತ್ಯೆ ಮಾಡಿಕೊಂಡ ರೈತ. ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ರಾಮಪ್ಪ ತಮ್ಮ ಜಂಟಿ ಬಾಬತ್ತಿನ ಹೊಲಕ್ಕೆ ಬೀಜ, ಗೋಬ್ಬರ, ಕೀಟನಾಶಕ ಖರ್ಚಿನ ಸಲುವಾಗಿ ಯರಗುಪ್ಪಿಯ ಕೆ.ವ್ಹಿ.ಜಿ ಬ್ಯಾಂಕ್‌ನಲ್ಲಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆ ಬೆಳೆ ಬಾರದ ಕಾರಣ ಮಾಡಿದ ಸಾಲ ತೀರಿಸುವುದು ಹೇಗೆ ? ಎಂದು ಮನನೊಂದು ಶುಕ್ರವಾರ ರಾತ್ರಿ 10:30 ಗಂಟೆ ವೇಳೆಗೆ ತಮ್ಮ ಮನೆಯ ದನ ಕಟ್ಟುವ ಶೆಡ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Edited By : Vijay Kumar
Kshetra Samachara

Kshetra Samachara

09/01/2021 03:21 pm

Cinque Terre

36.24 K

Cinque Terre

0

ಸಂಬಂಧಿತ ಸುದ್ದಿ